News Kannada
Friday, December 02 2022

ಬೆಂಗಳೂರು ನಗರ

ರೈತರ ಬೆಳೆಯನ್ನು ಸರ್ಕಾರವೇ ನೇರವಾಗಿ ಖರೀದಿಸಲಿ : ಡಿಕೆಶಿ

Photo Credit :

ರೈತರ ಬೆಳೆಯನ್ನು ಸರ್ಕಾರವೇ ನೇರವಾಗಿ ಖರೀದಿಸಲಿ : ಡಿಕೆಶಿ

ಬೆಂಗಳೂರು : ತೋಟಗಾರಿಕೆ ಬೆಳೆಗಳಾದ ಹೂವು, ಹಣ್ಣು, ತರಕಾರಿಗಳನ್ನು ಸರ್ಕಾರವೇ ರೈತರಿಂದ ನೇರವಾಗಿ ಖರೀದಿ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆ.ಜಿಗೆ ₹40-50ಕ್ಕೆ ಮಾರುತ್ತಿದ್ದ ಹಸಿಮೆಣಸಿನಕಾಯಿಯನ್ನು ರೈತರು ಒಂದೆರಡು ರೂ.ಗೆ ಮಾರುತ್ತಿದ್ದಾರೆ. ಕೆಲವರು ಹೊಲದಲ್ಲೇ ಗೊಬ್ಬರ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ 2 ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಹೂವ, ಹಣ್ಣು, ತರಕಾರಿ ಬೆಳೆಯುವ ಎಲ್ಲ ರೈತರ ಪರಿಸ್ಥಿತಿ ದಯನೀಯವಾಗಿದೆ. ಹೀಗಾಗಿ ನಾನು ಅಲ್ಲಿಗೆ ಹೋಗಿ, ಅವರ ಸಂಕಷ್ಟವನ್ನು ಕಣ್ಣಾರೆ ನೋಡಿದ್ದೇನೆ. ಮುಂದೆಯೂ ಹೋಗುತ್ತೇನೆ. ಅವರ ಧ್ವನಿಯಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ಪ್ಯಾಕೇಜ್ ಅವರಿಗೆ ತಲುಪುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ನಿಮ್ಮ ಕೃಷಿ, ತೋಟಗಾರಿಕಾ ಸಚಿವಾಲಯದಿಂದ ರೈತರ ಬೆಳೆ ನೇರವಾಗಿ ಖರೀದಿ ಮಾಡಿ. ಬೆಂಬಲ ಬೆಲೆಯನ್ನು ನೀವೇ ನಿರ್ಧರಿಸಿ. ಒಂದು ತಿಂಗಳು ತಡವಾಗಿ ಹಣ ಕೊಟ್ಟರೂ ಪರವಾಗಿಲ್ಲ. ಆದರೆ ಬೇಗ ಕೊಳೆಯುವ ಈ ಬೆಳೆಯನ್ನು ಮೊದಲು ಖರೀದಿ ಮಾಡಿ ಎಂಬುದಾಗಿ ಆಗ್ರಹಿಸಿದ್ದಾರೆ.

ನಿಮ್ಮ ಪ್ಯಾಕೇಜ್ ಪ್ರಕಾರ ಕುಂಟೆಗೆ 100 ರೂ. ಪರಿಹಾರ ಸಿಗುತ್ತದೆ. ಸಣ್ಣ ರೈತರು ಈ ಅಲ್ಪ ಮೊತ್ತಕ್ಕೆ ಆನ್ಲೈನ್ ನಲ್ಲಿ ಅರ್ಜಿ ಹಾಕಿಕೊಂಡು ಕೂರಲ್ಲ. ಹೀಗಾಗಿ ನೀವು ಒಂದು ತಂಡ ರಚಿಸಿ ಬೆಳೆ ಖರೀದಿ ಮಾಡಿ. ನೀವು ಮಾರುವ ಬೆಲೆಯಲ್ಲಿ ಅರ್ಧದಷ್ಟನ್ನು ರೈತರಿಗೆ ಕೊಡಿ. ಇದು ರಿಯಲ್ ಪ್ಯಾಕೇಜ್ ಅಲ್ಲ, ರೀಲ್ ಪ್ಯಾಕೇಜ್. 25 ಲಕ್ಷ ಮಂದಿ ಚಾಲಕ ವೃತ್ತಿ ಅವಲಂಬಿಸಿದ್ದಾರೆ. ಸವಿತಾ ಸಮಾಜ, ನೇಕಾರರು ಹೀಗೆ ಅಸಂಘಟಿತ ಕಾರ್ಮಿಕರಲ್ಲಿ ಎಷ್ಟು ಜನ ಅರ್ಜಿ ಹಾಕಿದ್ದಾರೆ ಎಂದಿದ್ದಾರೆ.

ಸರಕಾರ ನಿಜವಾಗಿ ನೊಂದು ಬೆಂದವರ ರಕ್ಷಣೆ ಮಾಡುತ್ತಿಲ್ಲ. ಮೊದಲು ಇವರ ರಕ್ಷಣೆಗೆ ಕಾರ್ಯಕ್ರಮ ರೂಪಿಸಿ. ವರ್ತಕರಿಗೆ ಒಂದು ವರ್ಷದಿಂದ ಸರಿಯಾಗಿ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಆದರೆ ಪಾಲಿಕೆ ಮಾತ್ರ ತೆರಿಗೆ ಪಾವತಿಗೆ ಪೀಡಿಸುತ್ತಿದೆ. ಅವರು ಹೇಗೆ ಕಟ್ಟುತ್ತಾರೆ? ಥಿಯೇಟರ್ ಮಾಲೀಕರು ಯಾವ ತೆರಿಗೆ ಕಟ್ಟುತ್ತಾರೆ. ಮದ್ಯದಂಗಡಿಗೆ 10 ಗಂಟೆವರೆಗೂ ಅವಕಾಶ ಕೊಟ್ಟರೆ, ರೈತನಿಗೆ ಬೆಳಗ್ಗೆ 8 ಗಂಟೆವರೆಗೂ ಮಾತ್ರ ಅವಕಾಶ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಸಮಯ ಅಂಗಡಿ ಬಾಗಿಲು ತೆಗೆದು, ಮುಚ್ಚಲು ಸಾಕಾಗುತ್ತದೆ. ಇನ್ನು ವ್ಯಾಪಾರ ಮಾಡುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಬಡವರಿಗೆ ನೆರವಾಗಲು ಆಹಾರ ಕಿಟ್ ನೀಡುವಂತೆ ನಮ್ಮ ಪಕ್ಷದ ನಾಯಕರು,ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಅದರಂತೆ ಎಲ್ಲ ಕಡೆಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಸುಮಾರು 200ಕ್ಕೂ ಹೆಚ್ಚು ಆಂಬುಲೆನ್ಸ್ ಗಳು ಸೇವೆ ನೀಡುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ದೇವೇಗೌಡರು ಪ್ರಧಾನಿಯಾಗಿ 25 ವರ್ಷವಾಗಿದೆ. ಇದು ರಾಜ್ಯಕ್ಕೆ ದೊಡ್ಡ ಗೌರವ. ಯಾರಿಗೂ ಇಂತಹ ದೊಡ್ಡ ಅವಕಾಶ ಸಿಕ್ಕಿಲ್ಲ. ಅವರು ತಮಗೆ ಸಿಕ್ಕಿದ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಕೆಲಸ ಮಾಡಿದ್ದಾರೆ. ಉತ್ತರ ಭಾರತೀಯರು ದಕ್ಷಿಣ ಭಾರತೀಯರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೂ ದೇವೇಗೌಡರು ತಮ್ಮ ಹೋರಾಟದಿಂದ ಆ ಎತ್ತರದ ಸ್ಥಾನ ತಲುಪಿದ್ದಾರೆ. ಅವರು ಈ ಸ್ಥಾನ ಅಲಂಕರಿಸಿದಾಗ ನಾವೆಲ್ಲ ಪಕ್ಷಬೇಧ ಮರೆತು ಸಂತೋಷಪಟ್ಟೆವು ಎಂದು ತಿಳಿಸಿದ್ದಾರೆ.

See also  ಬಿಜೆಪಿ-ಕಾಂಗ್ರೆಸ್ ಟ್ವೀಟ್ ಸಮರ; ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಸುಧಾಕರಣ್ಣಾ ಮೊದಲು ಲಸಿಕೆ ಕೊಡಿಸುವತ್ತ ಗಮನ ಹರಿಸಲಿ. ಪಂಚಾಯ್ತಿ, ರೆವೆನ್ಯು ಇಲಾಖೆ, ಪಾಲಿಕೆ ಅಧಿಕಾರಿಗಳಿಗೆ ಯಾರು ಸತ್ತಿದ್ದಾರೆ ಅಂತಾ ಗೊತ್ತಿದೆ. ಡೆತ್ ಆಡಿಟ್ ಮಾಡಲಿ. ನೀನು ಮೊದಲು ಬೆಡ್ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ನೀಡಿ, ಲಸಿಕೆ ಕೊಡುವತ್ತ ಗಮನ ಹರಿಸು. ಡೆತ್ ಆಡಿಟ್ ಕೆಲಸ ನಿನ್ನ ಕೈಯಲ್ಲಿ ಆಗೋಲ್ಲ. ಮೊದಲು ಈ ಕೆಲಸಗಳನ್ನು ಮಾಡು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು