News Kannada
Tuesday, January 31 2023

ಬೆಂಗಳೂರು ನಗರ

ಯಡಿಯೂರಪ್ಪ ನವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ: ಎಚ್. ವಿಶ್ವನಾಥ್

Photo Credit :

ಯಡಿಯೂರಪ್ಪ ನವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ: ಎಚ್. ವಿಶ್ವನಾಥ್

ಮೈಸೂರು: ‘ಹೈಕಮಾಂಡ್‌ ಹೇಳುವಾಗ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ ಎನ್ನುವ ಮೂಲಕ ಬಿ.ಎಸ್‌.ಯಡಿಯೂರಪ್ಪ ಬಹಳ ದೊಡ್ಡ ಮಾತನ್ನಾಡಿದ್ದಾರೆ. ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ತಿಳಿಸಿದರು.

 

ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಎಲ್ಲವೂ ಹೈಕಮಾಂಡ್‌ ತೀರ್ಮಾನದಂತೆ ನಡೆಯುತ್ತದೆ. ದೆಹಲಿಯ ನಾಯಕರು ಹೇಳಿದಂತೆ ನಡೆಯುವುದು ಮೊದಲಿಂದಲೂ ಇರುವ ಪರಿಪಾಠ. ನಾನು ಕೂಡಾ ದೆಹಲಿ ನಾಯಕರ ಮಾತನ್ನು ಮೀರುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. 

 

ರಾಜ್ಯದ ಆಡಳಿತ, ಜನರ ಹಿತದೃಷ್ಟಿಯಿಂದ ಅಧಿಕಾರ ಬಿಟ್ಟುಕೊಡಲು ಸಿದ್ದವಿದ್ದೇನೆ ಎಂದಿರುವುದನ್ನು ನಾಡಿನ ಜನರೂ ಸ್ವಾಗತಿಸುತ್ತಾರೆ’ ಎಂದರು.

 

ನಾಯಕತ್ವ ಬದಲಾವಣೆ ಬಗ್ಗೆ ಯಾರೋ ಮಾತನಾಡಿದ್ದಾರೆ, ‘ಸೈನಿಕ’ ದೆಹಲಿಗೆ ಹೋಗಿ ಯಾರನ್ನೋ ಭೇಟಿಯಾದ ಎಂಬ ಕಾರಣಕ್ಕೆ ಅವರು ರಾಜೀನಾಮೆ ಕೊಡುತ್ತಿಲ್ಲ. ಬಿಜೆಪಿಯಲ್ಲಿ ವಯಸ್ಸಿನ ಲಕ್ಷ್ಮಣ ರೇಖೆ ಇದೆ. 75 ವರ್ಷ ದಾಟಿದವರಿಗೆ ಯಾವುದೇ ಹುದ್ದೆ ಬೇಡ ಎಂಬ ನಿಯಮ ಇದೆ. 

 

ಯಡಿಯೂರಪ್ಪ ಅವರಿಗೆ ವಿನಾಯಿತಿ ಕೊಟ್ಟಿದ್ದರು. ಆದರೆ ವಯಸ್ಸು, ಆರೋಗ್ಯ ಎಲ್ಲವೂ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಮನವರಿಕೆ ಅವರಿಗೆ ಆಗಿದೆ. ಅರ್‌ಎಸ್‌ಎಸ್‌ ಕೂಡಾ ಅವರ ಮನವೊಲಿಸಿರಬಹುದು’ ಎಂದು ತಿಳಿಸಿದರು.

 

ವೀರಶೈವ ಸಮುದಾಯಕ್ಕೆ ಅವಕಾಶ ನೀಡಲಿ: ರಾಜ್ಯದಲ್ಲಿ ನನಗೆ ಪರ್ಯಾಯ ನಾಯಕರು ಇದ್ದಾರೆ ಎಂದು ಹೇಳಿರುವುದು ಕೂಡಾ ಯಡಿಯೂರಪ್ಪ ಅವರ ದೊಡ್ಡ ಮಾತು. ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಸಮರ್ಥರಾದವರು ಬಿಜೆಪಿಯಲ್ಲಿ ಇದ್ದಾರೆ ಎಂದಿದ್ದಾರೆ.

 

ಹೊಸ ಮುಖ್ಯಮಂತ್ರಿ ಮಾಡುವಾಗ ವೀರಶೈವ ಸಮುದಾಯಕ್ಕೆ ಆದ್ಯತೆ ನೀಡಲಿ. ಸಾಕಷ್ಟು ಅನುಭವ ಹೊಂದಿರುವ ಮುರುಗೇಶ ನಿರಾಣಿ, ನೇರ ಮಾತಿಗೆ ಹೆಸರುವಾಸಿಯಾದ ಬಸನಗೌಡ ಪಾಟೀಲ ಯತ್ನಾಳ್ ಅಂತಹವರಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯಪಟ್ಟರು.

See also  ರಾಜ್ಯದಲ್ಲಿ 114 ಅಕ್ರಮ ವಲಸಿಗರ ಗಡಿಪಾರು: ಕೇಂದ್ರ ಸರ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು