News Kannada
Tuesday, January 31 2023

ಬೆಂಗಳೂರು ನಗರ

ಸರ ಕದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದಾಗ ಆತ ಮಾಡಿದ್ದೇನು ಗೊತ್ತಾ ?

Photo Credit :

ಬೆಂಗಳೂರು, ;ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರದ ತುಂಡನ್ನು ಅಪಹರಿಸಿದ ದರೋಡೆಕೋರ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಸಂದರ್ಭದಲ್ಲಿ ಸರದ ತುಂಡನ್ನು ನುಂಗಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ರಾತ್ರಿ 9 ಗಂಟೆ ಸಂದರ್ಭದಲ್ಲಿ ಎಂ.ಟಿ.ಸ್ಟ್ರೀಟ್ನ ನಿವಾಸಿ ಹೇಮಾ ಎಂಬುವರು ಅಂಗಡಿಯಿಂದ ಮನೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮೂವರು ದರೋಡೆಕೋರರು ಅವರನ್ನು ಹಿಂಬಾಲಿಸಿ ಅವರಲ್ಲಿ ಒಬ್ಬ ಆಕೆಯ ಕೊರಳಿಗೆ ಕೈ ಹಾಕಿ ಸರ ಅಪಹರಿಸಲು ಪ್ರಯತ್ನಿಸಿದ. ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಸರದ ಒಂದು ಭಾಗ ತುಂಡಾಗಿ ಆತನ ಕೈ ಸೇರಿದೆ . ಮಹಿಳೆ ಜೋರಾಗಿ ಕೂಗಿಕೊಂಡಾಗ ಸಾರ್ವಜನಿಕರು ಓಡಿಬಂದು ಮೂವರಲ್ಲಿ ಒಬ್ಬನನ್ನು ಹಿಡಿದು ಥಳಿಸಿ ಸಿಟಿ ಮಾರ್ಕೆಟ್ ಪೊಲೀಸರಿಗೆ ಒಪ್ಪಿಸಿದರು. ಇನ್ನಿಬ್ಬರು ಓಡಿಹೋದರು.

See also  ಇಂದಿನಿಂದ ಬಿಜೆಪಿ ರಾಜ್ಯ ಪ್ರವಾಸ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು