ಬೆಂಗಳೂರು : ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡುವಿಕೆಯಲ್ಲಿ ಶೇ 100 ಗುರಿ ಸಾಧನೆಗೆ ಮುಂದಾಗಿರುವ ಬಿಬಿಎಂಪಿ ಇದಕ್ಕಾಗಿ ವಿನೂತನ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದೆ. ಕಸ ವಿಲೇವಾರಿಗಾಗಿ ಗುರುತಿಸಿರುವ ಬ್ಲಾಕ್ಗಳು ಮತ್ತು ಬೀದಿಗಳಲ್ಲಿ ಲಸಿಕಾ ಕೇಂದ್ರ ತೆರೆಯಲು ಮುಂದಾಗಿದೆ.
ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್, ‘ಕಸ ವಿಲೇವಾರಿಗಾಗಿ 750 ಮನೆಗೊಂದರಂತೆ ಸುಮಾರು 4 ಸಾವಿರ ಬ್ಲಾಕ್ಗಳನ್ನು ರಚಿಸಲಾಗಿದೆ. ವಾರ್ಡ್ನಲ್ಲಿ 15ರಿಂದ 50 ಬ್ಲಾಕ್ಗಳಿವೆ. ಸೋಮವಾರದಿಂದ ಈ ಎಲ್ಲ ಬ್ಲಾಕ್ಗಳಲ್ಲಿ ಹಾಗೂ ಬೀದಿಗಳಲ್ಲಿ (ಲೇನ್) ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.