News Kannada
Sunday, December 04 2022

ಬೆಂಗಳೂರು ನಗರ

ತಮ್ಮ ಹೋಮ್ ಮಿನಿಸ್ಟರ್ ಗೆ ಸೀರೆ ಖರೀದಿಸಿದ ಚೀಫ್ ಮಿನಿಸ್ಟರ್

Photo Credit :
ಬೆಂಗಳೂರು : ‘ಸೀರೆ ಸೆಲೆಕ್ಷನ್‌ ಮಾಡುವುದು ನಮಗೆ ಗೊತ್ತಾಗುವುದಿಲ್ಲ. ದುಡ್ಡು ಕೊಟ್ಟು ಬೈಸಿಕೊಳ್ಳುವ ಕೆಲಸ ಇದು. ಸೆಲೆಕ್ಷನ್‌ ಚೆನ್ನಾಗಿಲ್ಲ ಎಂದು ಪತ್ನಿ ಬಯ್ಯದಿದ್ದರೆ ಸಾಕು.’ ನಾಡಿನ ದೊರೆ ಬಸವರಾಜ ಬೊಮ್ಮಾಯಿ ಅವರು ‘ಗೃಹ ಸಚಿವರ’ ಬಗ್ಗೆ ಭೀತಿ ವ್ಯಕ್ತಪಡಿಸಿದ ರೀತಿಯಿದು!

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ದಿ.ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿ ಭವನದ ಖಾದಿ ಮಾರಾಟ ಮಳಿಗೆಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಮಾರು 16 ಸಾವಿರ ರು. ಮೌಲ್ಯದ ಸೀರೆ ಹಾಗೂ ಇತರ ಉಡುಗೆ ಖರೀದಿಸಿದರು. ಅನಂತರ ಸೀರೆ ಸೆಲೆಕ್ಷನ್‌ ಸರಿ ಹೋಗದಿದ್ದರೆ ತಮ್ಮ ಗೃಹ ಸಚಿವರು ಅರ್ಥಾತ್‌ ಪತ್ನಿ ಬೈಯದಿದ್ದರೆ ಸಾಕು ಎಂದು ತಮಾಷೆಯಾಗಿ ಹೇಳಿದರು.

ಖಾದಿ ಎಂಪೋರಿಯಂಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಖಾದಿ ಬಟ್ಟೆಯ ಬಗ್ಗೆ ಮಳಿಗೆಯ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಪಟ್ಟೆ ಇರುವ ಬಟ್ಟೆ ಬೇಡ, ಈ ಕಲರ್‌ ರಾಂಗ್‌ ಆಗಿದೆ ಎಂದು ಹೇಳುತ್ತಾ ಕೊನೆಗೆ ತಮಗೆ ಜುಬ್ಬಾ ಹೊಲೆಸಿಕೊಳ್ಳಲು ತಲಾ ಮೂರು ಮೀಟರ್‌ ಅಳತೆಯ ಹಲವು ಜುಬ್ಬಾ ಪೀಸ್‌ ಖರೀದಿಸಿದರು. ನಂತರ ಪತ್ನಿ ಚನ್ನಮ್ಮ ಅವರಿಗಾಗಿ ಸೀರೆ ಖರೀದಿಸಲು ಮುಂದಾದ ಬೊಮ್ಮಾಯಿ ಅವರು ಮೂರ್ನಾಲ್ಕು ಸೀರೆಗಳನ್ನು ಪರಿಶೀಲಿಸಿ ಕೊನೆಗೆ ಹಸಿರು ಬಣ್ಣದ ಸೀರೆ ಆಯ್ಕೆ ಮಾಡಿದರು. ಆಗ ತಮ್ಮ ಜೊತೆಗಿದ್ದ ಸಚಿವ ಗೋವಿಂದ ಕಾರಜೋಳ ಅವರನ್ನು ಉದ್ದೇಶಿಸಿ, ‘ಕಾರಜೋಳ ಸಾಹೇಬ್ರೇ ನೀವೂ ಸೀರೆ ಖರೀದಿಸಿ’ ಎಂದು ಹೇಳಿದರು.

‘ಸೀರೆ ಖರೀದಿ ಬಗ್ಗೆ ನನಗೆ ಗೊತ್ತಾಗುವುದಿಲ್ಲ’ ಎಂದು ಕಾರಜೋಳ ಅವರು ಪ್ರತಿಕ್ರಿಯಿಸಿದರು. ಆಗ ಬೊಮ್ಮಾಯಿ ಅವರು, ‘ದುಡ್ಡು ಕೊಟ್ಟು ಬೈಸಿಕೊಳ್ಳುವ ಕೆಲಸ ಇದು. ನಾವೇನೋ ಖುಷಿಯಿಂದ ಮನೆಯವರಿಗೆ ಎಂದು ಸೀರೆ ಖರೀದಿ ಮಾಡಿದ್ದೇವೆ. ಆದರೆ ಸೀರೆ ಸೆಲೆಕ್ಷನ್‌ ಸರಿಯಲ್ಲ ಎಂದು ಪತ್ನಿ ಬೈಯದಿದ್ದರೆ ಸಾಕು’ ಎಂದು ಹಾಸ್ಯವಾಗಿ ಹೇಳಿ ಅಲ್ಲಿದ್ದವರು ನಗುವಂತೆ ಮಾಡಿದರು. ಒಟ್ಟು 16,031 ರುಪಾಯಿ ಮೊತ್ತದ ಬಟ್ಟೆಯನ್ನು ಮುಖ್ಯಮಂತ್ರಿಗಳು ಖರೀದಿಸಿದರು.

See also  ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘನೆ: ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು