News Kannada
Sunday, December 04 2022

ಬೆಂಗಳೂರು ನಗರ

ರೌಡಿಶೀಟರ್ ಜೆಸಿಬಿ ನಾರಾಯಣ ಹತ್ಯೆಗೆ ಯತ್ನಿಸಿದ ದುಷ್ಕರ್ಮಿಗಳು

Photo Credit :

ಬೆಂಗಳೂರು,ಡಿ.8 : ಹಾಡಹಗಲೇ ಸಿನಿಮಾ ಶೈಲಿಯಲ್ಲಿ ರೌಡಿ ಜೆಸಿಬಿ ನಾರಾಯಣ ಮೇಲೆ ನಾಲ್ಕೈದು ದುಷ್ಕರ್ಮಿಗಳ ತಂಡ ಹತ್ಯೆಗೆ ಯತ್ನಿಸಿರುವ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹುಳಿಮಾವು ಠಾಣೆ ರೌಡಿಶೀಟರ್ ಜೆಸಿಬಿ ನಾರಾಯಣ ತಮ್ಮ ಕಾರಿನಲ್ಲಿ ಕಳೆದ ಭಾನುವಾರ(ಡಿ.5) ಬೆಳಗ್ಗೆ 9ರಿಂದ 9.30ರ ಸುಮಾರಿನಲ್ಲಿ ಹೋಗುತ್ತಿದ್ದರು.

ಹುಳಿಮಾವು ಡಿಎಲ್‍ಎಫ್ ರಸ್ತೆಯಲ್ಲಿ ಬರುತ್ತಿದ್ದಂತೆ ಹೊಂಚು ಹಾಕಿದ್ದ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಏಕಾಏಕಿ ನಾರಾಯಣ ಕಾರಿನ ಬಳಿ ದೌಡಾಯಿಸಿ ಅಡ್ಡಗಟ್ಟಿ ದಾಳಿಗೆ ಯತ್ನಿಸಿದ್ದಾರೆ. ದಾಳಿಯ ಸೂಕ್ಷ್ಮತೆ ಅರಿತ ನಾರಾಯಣ ತಕ್ಷಣ ತಮ್ಮ ಕಾರನ್ನು ರಿವರ್ಸ್ ಪಡೆದುಕೊಳ್ಳುತ್ತಿದ್ದಂತೆ ದುಷ್ಕರ್ಮಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಸ್ವಲ್ಪ ದೂರ ಬೆನ್ನಟ್ಟಿದ್ದಾರೆ.

ಆದರೆ ನಾರಾಯಣ ಕೂದಲೆಳೆಯ ಅಂತರದಲ್ಲಿ ಅತಿ ವೇಗವಾಗಿ ತಮ್ಮ ಕಾರನ್ನು ರಿವರ್ಸ್ ಪಡೆದುಕೊಂಡು ಬೇರೆ ರಸ್ತೆಯಲ್ಲಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿ ಪ್ರಾಣ ಉಳಿಸಿಕೊಂಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ದಾಳಿಗೆ ಯತ್ನಿಸಿದ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

See also  ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಬಗ್ಗೆ ನಿರ್ಧಾರ ಮಾಡಲಾಗಿಲ್ಲ; ಸಚಿವ ಡಾ.ಸುಧಾಕರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು