ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC)ಯಲ್ಲಿ ಖಾಲಿ ಇರುವ 726 ತಾಂತ್ರಿಕ ಸಹಾಯಕ, 200 ಕರಾಸಾ ಪೇದೆ ಹುದ್ದೆಗಳು ಮತ್ತು 3,745 ಚಾಲನಾ ಸಿಬ್ಬಂದಿ ಸೇರಿ ಒಟ್ಟು 4,600ಕ್ಕೂ ಹೆಚ್ಚು ಹುದ್ದೆಗಳ ನೇರ ನೇಮಕಾತಿಗೆ ಮರು ಚಾಲನೆ ನೀಡುವಂತೆ ಸರ್ಕಾರದ ಅನುಮತಿ ಕೋರಿ ಮನವಿ ಮಾಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಪ್ರಕಟಣೆ ಹೊರಡಿಸಿದ್ದು, ಪ್ರಸ್ತುತ ಕೋವಿಡ್-19 ಕಾರಣ KSRTCಯಲ್ಲಿ ಖಾಲಿ ಇರುವ 726 ತಾಂತ್ರಿಕ ಸಹಾಯಕ, 200 ಕರಾಸಾ ಪೇದೆ ಹುದ್ದೆಗಳು ಮತ್ತು 3,745 ಚಾಲನಾ ಸಿಬ್ಬಂದಿ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಸದ್ಯ ಕೊರೊನಾ ಕಾರಣ ಈ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರದ ಅನುಮತಿ ಮಾಡಲಾಗಿದೆ.
pic.twitter.com/IkJ0VgzrYr
— KSRTC (@KSRTC_Journeys)