News Kannada
Monday, November 28 2022

ಬೆಂಗಳೂರು ನಗರ

ಮಾಲ್, ಚಿತ್ರಮಂದಿರ ಪ್ರವೇಶಕ್ಕೆ ಇ-ಪಾಸ್ ವ್ಯವಸ್ಥೆ - 1 min read

Photo Credit :

ಬೆಂಗಳೂರು:ರಾಜ್ಯದಲ್ಲಿ ಓಮಿಕ್ರಾನ್ ವೈರಸ್‍ನ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ  ಮಾಲ್, ದೇವಸ್ಥಾನ, ಚರ್ಚ್, ಸಿನಿಮಾ ಮಂದಿರ, ಕ್ಲಬ್, ಪಬ್, ಎಲ್ಲಿ ಬೇಕೋ ಅಲ್ಲಿ ಹೋಗಬೇಕೆಂದರೆ ಇನ್ನು ಮುಂದೆ ಇ-ಪಾಸ್ ಪಡೆದಿರಬೇಕು. ಇ-ಪಾಸ್ ಇದ್ದರೆ ಮಾತ್ರ ಸಿಟಿಯಲ್ಲಿ ಪ್ರವೇಶ ಸಿಗಲಿದೆ.ರಾಜ್ಯದಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸುವ ಸಲಹೆ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಡಬಲ್ ಡೋಸ್ ವ್ಯಾಕ್ಸಿನ್ ಕಡ್ಡಾಯ ಜಾರಿ ಹಾಗೂ ಪಾಲನೆ ದೃಷ್ಟಿಯಿಂದ ವ್ಯಾಕ್ಸಿನ್ ಪಡೆದವರಿಗೆ ಇ-ಪಾಸ್ ನೀಡಲು ತೀರ್ಮಾನ ಮಾಡಲಾಗಿದೆ. ಓಮಿಕ್ರಾನ್ ವೈರಸ್ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯೂನಿವರ್ಸಲ್ ಪಾಸ್ ಯೋಜನೆಯನ್ನು ಜಾರಿಗೊಳಿಸುವಂತೆ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮೆಟ್ರೋ, ಹೈಪರ್ ಮಾರ್ಕೆಟ್, ಬಸ್ ಹಾಗೂ ಸಿನಿಮಾ ಮಂದಿರ ಎಲ್ಲೆಡೆ ಪ್ರವೇಶ ಪಡೆಯಬೇಕೆಂದರೆ ಇ-ಪಾಸ್ ಹೊಂದಿರಬೇಕು. ಈಗಾಗಲೇ ಮಹಾರಾಷ್ಟ್ರದಲ್ಲಿ ಯೂನಿವರ್ಸಲ್ ಪಾಸ್ ವ್ಯವಸ್ಥೆ ಜಾರಿಗೊಳಿಸಿದೆ.

ನಿನ್ನೆ ಓಮಿಕ್ರಾನ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆರೋಗ್ಯಾಕಾರಿಗಳು ಬೆಂಗಳೂರಿನಲ್ಲಿ ದಿಢೀರ್ ಸಭೆ ನಡೆಸಿದ್ದಾರೆ. ಎಲ್ಲ ವಲಯಗಳ ಆರೋಗ್ಯಾಕಾರಿಗಳ ಜತೆ ಮುಖ್ಯ ಆಯುಕ್ತರು ಸಭೆ ಕರೆದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

ಬೆಳಗಾವಿ ಅಧಿವೇಶನವನ್ನು ಅರ್ಧಕ್ಕೇ ಮೊಟಕುಗೊಳಿಸಿ ಬೆಂಗಳೂರಿಗೆ ದಿಢೀರ್ ಆಗಮಿಸಿದ ಆಯುಕ್ತರು ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮಕ್ಕೆ ಮುಂದಾಗಿದ್ದಾರೆ.

See also  ಕರ್ನಾಟಕದಲ್ಲಿ 1,784 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು