ರಾಜ್ಯ ವಿಧಾನಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಹೇಳಿಕೆಗೆ ಎಸ್ಪಿ ಸಂಸದೆ ಜಯಾ ಬಚ್ಚನ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಜಯಾ ಬಚ್ಚನ್, ಇದು ನಾಚಿಕೆಗೇಡಿನ ಸಂಗತಿ. ಸದನದಲ್ಲಿ ಇನ್ನು ಮುಂದೆ ಯಾರೂ ಈ ರೀತಿ ಮಾತನಾಡದಂತೆ ಕಾಂಗ್ರೆಸ್ ಪಕ್ಷ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ – ತೇಜಸ್ವಿ ಸೂರ್ಯ ಖಂಡಿಸಿದ್ದು, ವಿಧಾನಸಭೆಯಲ್ಲಿ ಪದೇ ಪದೇ ಇಂತಹ ಹೇಳಿಕೆ ನೀಡುವವರ ಬಗ್ಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.