News Kannada
Tuesday, January 31 2023

ಬೆಂಗಳೂರು ನಗರ

ಹಲವು ಕಂಪನಿಗಳ ಹೆಸರಲ್ಲಿ ಸಾಲ ಕೊಟ್ಟು ವಸೂಲಿ ಮಾಡ್ತಿದ್ದ ಇಬ್ಬರ ಬಂಧನ

Photo Credit :

ಬೆಂಗಳೂರು: ಬರೋಬ್ಬರಿ 83 ಕಂಪನಿಗಳ ಹೆಸರು ಹೇಳಿ ಅದಕ್ಕೆಲ್ಲ ನಾವೇ ಡೈರೆಕ್ಟರ್​ ಎನ್ನುತ್ತ ಸಾಲ ಕೊಟ್ಟು ವಸೂಲಿಗೆ ಇಳಿಯುತ್ತಿದ್ದ ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಗಿ ಕೆಲಸ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಎಸ್‌ಎಸ್‌ಎಲ್‌ಸಿವರೆಗೆ ಓದಿಕೊಂಡಿದ್ದಾರೆ.

ಕಾಮಾರಾಜ್ ಮೋರೆ ಹಾಗೂ ದರ್ಶನ್ ಚೌಹಾಣ್ ಬಂಧಿತರು. ಆರೋಪಿಗಳು ಜನರಿಗೆ ಲೋನ್​ ಕೊಟ್ಟು ಬಳಿಕ ಹಿಂಸೆ ನೀಡುತ್ತಿದ್ದರು. ದಿನಕ್ಕೆ ಮೂರರಿಂದ ನಾಲ್ಕು ಕೋಟಿ‌ ವ್ಯವಹಾರ ನಡೆಸುತ್ತಿದ್ದರು. ಈ ಕಂಪನಿಗಳ ಮುಖ್ಯಸ್ಥರು ಚೀನಾದಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದರು. ಅವರ ಮೂಲಕ ಸಾಫ್ಟ್​ವೇರ್​ ಪಡೆದು ಕಾಮಾರಾಜ್ ಮೋರೆ ಹಾಗೂ ದರ್ಶನ್ ಚೌಹಾಣ್ ಜನರಿಗೆ ಲೋನ್​ ನೀಡುತ್ತಿದ್ದರು. ಬಳಿಕ ಲೋನ್​ ಪಡೆದವರಿಗೆ ಕರೆ ಮಾಡಿ ಬೆದರಿಕೆ ಹಾಗೂ ಹಲ್ಲೆ ನಡೆಸುತ್ತಿದ್ದರು.

ಆರ್​ಬಿಐ ಗಮನಕ್ಕೆ ಬಾರದಂತೆ ಆರೋಪಿಗಳು ವ್ಯವಹಾರ ನಡೆಸುತ್ತಿದ್ದರು. ಸಾರ್ವಜನಿಕರು APK Link APP ಮೂಲಕ ಸಾಲ ಪಡೆಯುತ್ತಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು, ಹಲವು ಕಂಪನಿಗಳು ಹಾಗೂ ಅವರು ಬಳಕೆ ಮಾಡುತ್ತಿದ್ದ 65 ಅಕೌಂಟ್​ಗಳನ್ನು ಸೀಜ್​ ಮಾಡಿದ್ದಾರೆ.

See also  ದಕ್ಷಿಣ ವಲಯ ಪರಿಷತ್ತಿನ 29ನೇ ಸಭೆಯಲ್ಲಿ ಅಂತರ್ ರಾಜ್ಯ ವಿಚಾರಗಳ ಚರ್ಚೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು