News Kannada
Tuesday, November 29 2022

ಬೆಂಗಳೂರು ನಗರ

ಬೆಂಗಳೂರು: ಮನೆಗಳ ಚಾವಣಿ ಮೇಲೆ ಜಿಗಿಯುವಾಗ ಆಯತಪ್ಪಿ ನೆಲಕ್ಕೆ ಬಿದ್ದ ಕಳ್ಳ ಸಾವು - 1 min read

Elderly woman murdered on suspicion of witchcraft
Photo Credit : IANS

ಬೆಂಗಳೂರು(ಜ.15) : ವೃತ್ತಿಪರ ಕಳ್ಳನೊಬ್ಬ ಮನೆಯ ಶೀಟಿನ ಚಾವಣಿಯಿಂದ ಬೇರೊಂದು ಮನೆ ಶೀಟಿನ ಚಾವಣಿ ಮೇಲೆ ಜಿಗಿಯುವ ವೇಳೆ ಶೀಟ್‌ತುಂಡಾಗಿ ನೆಲಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ವಿಲ್ಸನ್‌ಗಾರ್ಡನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಿದ್ದಾಪುರ ನಿವಾಸಿ ಥಾಮಸ್‌(37) ಮೃತ ವ್ಯಕ್ತಿ. ಬೆಳಗ್ಗೆ 9.30ರ ಸುಮಾರಿಗೆ ನಾರಾಯಣಪುರದ ಶೀಟಿನ ಮನೆಯ ಚಾವಣಿ ಏರಿದ್ದು, ಮೂರ್ನಾಲ್ಕು ಮನೆಗಳ ಛಾವಣಿಗೆ ಜಿಗಿದಿದ್ದಾನೆ. ಬಳಿಕ ಮತ್ತೊಂದು ಶೀಟಿನ ಮನೆಯ ಚಾವಣಿ ಮೇಲೆ ಜಿಗಿಯುವಾಗ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವ ಕಾರಣಕ್ಕೆ ಥಾಮಸ್‌ಮನೆಯ ಚಾವಣಿ ಏರಿದ್ದ ಎಂಬುದು ಗೊತ್ತಿಲ್ಲ. ಥಾಮಸ್‌ವೃತ್ತಿಪರ ಕಳ್ಳನಾಗಿದ್ದು, ಮಡಿವಾಳ, ಸಿದ್ದಾಪುರ, ಮೈಕೋ ಲೇಔಟ್‌ಸೇರಿದಂತೆ ವಿವಿಧ ಪೊಲೀಸ್‌ಠಾಣೆಗಳಲ್ಲಿ ಮನೆಗಳವು ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಆರೋಪಿಗೆ ಜೈಲು ಶಿಕ್ಷೆಯಾಗಿದ್ದು, ಜೈಲು ವಾಸವನ್ನೂ ಅನುಭವಿಸಿದ್ದಾನೆ. ಕೆಲ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಆದರೆ, ಕಳೆದ ಐದು ತಿಂಗಳಿಂದ ಮನೆಗೆ ಹೋಗಿಲ್ಲ ಎಂಬ ವಿಚಾರ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಥಾಮಸ್‌ ಬೆಳಗ್ಗೆ ಯಾವ ಕಾರಣಕ್ಕೆ ನಾರಾಯಣಪುರಕ್ಕೆ ಬಂದಿದ್ದ. ಏತಕ್ಕಾಗಿ ಮನೆ ಚಾವಣಿ ಏರಿದ್ದ ಹಾಗೂ ಘಟನೆ ವೇಳೆ ಈತನ ಜತೆಗೆ ಬೇರೆ ಯಾರಾದರೂ ಇದ್ದರೆ ಎಂಬುದು ತಿಳಿದು ಬಂದಿಲ್ಲ. ಥಾಮಸ್‌ಗಾಂಜಾ ಮತ್ತಿನಲ್ಲಿ ಬಿದ್ದಿರುವ ಬಗ್ಗೆ ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಈ ಬಗ್ಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ. ವಿಲ್ಸನ್‌ಗಾರ್ಡನ್‌ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  `ಸನ್ನಿ ನೈಟ್' ನಿಂದ ನಿಮ್ಮ ನಿದ್ದೆಗೆಡುವುದ್ಯಾಕೇ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು