News Kannada
Tuesday, November 29 2022

ಬೆಂಗಳೂರು ನಗರ

ಲಾಕ್​​ಡೌನ್ ಮಾಡುವ ವಿಚಾರ ನಮ್ಮ ಮುಂದೆ ಇಲ್ಲ; ಆರ್​.ಅಶೋಕ್​ - 1 min read

Quick relief to farmers who have suffered crop losses
Photo Credit :

ಬೆಂಗಳೂರು : ಹೋಟೆಲ್​ ಮಾಲೀಕರಾಗಲಿ, ಬೇರೆ ಯಾರಾಗಲಿ ನಾವು ಅವರ ಒತ್ತಡಕ್ಕೆ ಮಣಿಯೋಕೆ ಆಗಲ್ಲ. ತಜ್ಞರ ಸಲಹೆಯಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ಹೇಳಿದ್ದಾರೆ.

ಸಂಜೆ ಸಿಎಂ ಕೋವಿಡ್ ಸಭೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ವೈದ್ಯಕೀಯ ಸೌಲಭ್ಯ ಕುರಿತಂತೆ ಚರ್ಚೆಯಾಗಲಿದೆ.

ಕೋವಿಡ್ ಪ್ರಮಾಣ ಹೆಚ್ಚಾಗಿದೆ. ಆದರೆ, ಸಾವಿನ ಪ್ರಮಾಣ ಕಡಿಮೆಯಿದೆ. ಬೇರೆ ರಾಜ್ಯಗಳಲ್ಲಿ‌ಸೋಂಕು‌ ತಗ್ಗುತ್ತಿದೆ. ಸೋಂಕು ಕಡಿಮೆಯಾದರೆ ರಿಲ್ಯಾಕ್ಸ್ ಮಾಡಬಹುದು. ಆದರೆ, ಲಾಕ್​ಡೌನ್ ವಿಚಾರ ನಮ್ಮ ಮುಂದಿಲ್ಲ. ಯಾರಿಗೂ ಸ್ವಲ್ಪ ಲಾಭವಾಗುತ್ತೆ ಅಂತ ರಿಲ್ಯಾಕ್ಸ್ ಇಲ್ಲ. ಲಕ್ಷಾಂತರ ಜನರನ್ನ ಕಷ್ಟಕ್ಕೆ ದೂಡುವುದಿಲ್ಲ.

ಕಾಂಗ್ರೆಸ್ ಪಾದಯಾತ್ರೆ ಕುರಿತು ಮಾತನಾಡಿ, ಬೆಟ್ಟ ಅಗೆದು ಇಲಿ ಹಿಡಿದ್ರು ಎನ್ನುವ ಹಾಗೆ ಕಾಂಗ್ರೆಸ್​ನವರ ಮನಸ್ಥಿತಿ. ರ್ಯಾಲಿಯಲ್ಲಿ ಯಾರು ಮೊದಲಿರಬೇಕು. ಯಾರು ಹಿಂದಿರಬೇಕು ಇದು ಅವರಲ್ಲಿತ್ತು. ಇದು ಡಿಕೆಶಿ, ಸಿದ್ದರಾಮಯ್ಯ ಮೇಲಾಟದ ಪಾದಯಾತ್ರೆ. ಹಿಂದೆ ಎಸ್.ಎಂ.ಕೃಷ್ಣರು ಪಾದಯಾತ್ರೆ ಮಾಡಿದ್ರು. ಆಗ ಕೋರ್ಟ್ ಛೀಮಾರಿ ಹಾಕಿತ್ತು ಎಂದು ಕಾಂಗ್ರೆಸ್​ ನಾಯಕರಿಗೆ ಟಾಂಗ್​ ನೀಡಿದ್ದಾರೆ.

See also  ರೌಡಿ ಕೊಲೆಗೆ ಸಂಚು ರೂಪಿಸುತ್ತಿದ್ದ ನಾಲ್ವರು ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು