ಬೆಂಗಳೂರು/ಶಿವಮೊಗ್ಗ, (ಫೆ.19) : ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಫ್‌ಐಆರ್ ಹಾಕಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.
ಶಿವಮೊಗ್ಗ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಯುವ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಇದರಿಂದ 15 ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದರಿಂದ ಡಿಕೆ ಶಿವಕುಮಾರ್ ಗರಂ ಆಗಿದ್ದು. ಶಿವಮೊಗ್ಗ ಎಸ್‌ಪಿಗೆ ಕರೆ ಮಾಡಿ ಕೇಸ್ ಹಾಕಿದ್ದರ ಬಗ್ಗೆ ವಿವರಣೆ ಕೇಳಿದ್ದಾರೆ.
ಶಿವಮೊಗ್ಗದಲ್ಲಿ ಈಶ್ವರಪ್ಪ ಆಗಮಿಸುತ್ತಿದ್ದ ವೇಳೆ ನೂರಾರೂ ಜನರು ರ್ಯಾಲಿ ಮಾಡಿದ್ರು. 144 ಸೆಕ್ಷನ್ ಮಧ್ಯೆ ರ್ಯಾಲಿ ಮಾಡಿದ್ರೂ ಕೇಸ್ ಯಾಕೆ ಹಾಕಿಲ್ಲ ಎಂದು ಎಸ್‌ಪಿಗೆ ಡಿಕೆಶಿ ಪ್ರಶ್ನಿಸಿದ್ದಾರೆ.