News Kannada
Saturday, September 24 2022

ಬೆಂಗಳೂರು ನಗರ

ಮದ್ಯ ಮಾರಾಟ ದರ ಏರಿಸುವ ಯಾವುದೇ ಚಿಂತನೆಯಿಲ್ಲ: ಸಚಿವ ಕೆ.ಗೋಪಾಲಯ್ಯ - 1 min read

Photo Credit : G Mohan

ಬೆಂಗಳೂರು: ಮದ್ಯ ಮಾರಾಟ ದರ ಏರಿಸುವ ಯಾವುದೇ ಚಿಂತನೆಯಿಲ್ಲ. ಆದಾಯ ಹೆಚ್ಚಳದ ಕುರಿತು ಬಜೆಟ್​ಗೆ ಮುನ್ನ ಮುಖ್ಯಮಂತ್ರಿ ಜತೆಗೆ ರ್ಚಚಿಸಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಕರೊನಾ ಸಂಕಷ್ಟದ ನಡುವೆಯೂ ಅಬಕಾರಿ ಇಲಾಖೆಯಿಂದ ರಾಜ್ಯದ ಬೊಕ್ಕಸಕ್ಕೆ ಗಮನಾರ್ಹ ಆದಾಯ ಸಂದಾಯವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2021-22) 25 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಗುರಿಯಿದ್ದು, ಈಗಾಗಲೆ 23,247 ಕೋಟಿ ರೂ. ಸಂಗ್ರಹವಾಗಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಅಬಕಾರಿ ಸಂಘ- ಸಂಸ್ಥೆಗಳೊಂದಿಗೆ ಬಜೆಟ್ ಪೂರ್ವ ಸಭೆ ನಂತರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು.

2022-23ನೇ ಸಾಲಿನ ಮುಂಗಡಪತ್ರ ಪೂರ್ವ ಅಬಕಾರಿ ಸಂಘ-ಸಂಸ್ಥೆಗಳ ಜತೆಗೆ ಸೌಹಾರ್ದಯುತ ಚರ್ಚೆಯಾಗಿದೆ. ಸಿಎಂ ಜತೆಗೆ ಅಬಕಾರಿ ಸಂಘಟನೆಗಳ ಬೇಡಿಕೆಗಳ ಬಗ್ಗೆ ಮತ್ತೊಮ್ಮೆ ರ್ಚಚಿಸುತ್ತೇವೆ ಎಂದರು.

ಅಬಕಾರಿ ಉದ್ಯಮದ ಸುಗಮ ಕಾರ್ಯನಿರ್ವಹಣೆ, ಬೊಕ್ಕಸಕ್ಕೆ ವರಮಾನದ ದೃಷ್ಟಿಯಿಂದ ಚಾಲ್ತಿ ಅಬಕಾರಿ ಕಾಯ್ದೆ ಮತ್ತು ನಿಯಮಗಳನ್ನು ಪರಿಷ್ಕರಿಸಬೇಕು ಎಂದು ಕರ್ನಾಟಕ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್​ಹೆಗ್ಡೆ ಮೊರೆಯಿಟ್ಟಿದ್ದಾರೆ. ನಿರಂತರ ನಷ್ಟಕ್ಕೆ ಗುರಿಯಾಗಿರುವ ದ್ರಾಕ್ಷಾ ವೈನ್ ಮಾರಾಟಗಾರರಿಗೆ ಬಿಯರ್ ಮಾರಾಟ ಮಾಡಲು ಅನುಮತಿ ನೀಡಿ ಸಂಕಷ್ಟದಿಂದ ಪಾರು ಮಾಡಬೇಕು ಎಂದು ರಾಜ್ಯ ದ್ರಾಕ್ಷಾ ವೈನ್ ಮಾರಾಟಗಾರರ ಸಂಘ ಮನವಿ ಮಾಡಿದೆ.

See also  ಮಾಸ್ಕೋ: ಫಿಫಾ ವಿಶ್ವಕಪ್ ನಲ್ಲಿ ತನ್ನ ತಂಡವು ಸೌದಿ ಅರೇಬಿಯಾದ ವಿರುದ್ಧ ಸೋಲುಂಡಿರುವುದರಿಂದ ಆಘಾತಗೊಂಡ ಈಜಿಪ್ಟ್ ನ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು