ಬೆಂಗಳೂರು: ಕರ್ನಾಟಕದ 91 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಅವರನ್ನು ಉಕ್ರೇನ್ ನಿಂದ ಸುರಕ್ಷಿತವಾಗಿ ಮರಳಲು ನಮ್ಮ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಅವರ ಸುರಕ್ಷತವಾಗಿ ಮರಳುವಿಕೆಗಾಗಿ ಎಲ್ಲರೂ ಪ್ರಾರ್ಥಿಸೋಣ ಈ ಕುರಿತಂತೆ ಮಾಹಿತಿ ನೀಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಂದಿದ್ದಾರೆ.
ಉಗ್ರೇನ್ ನಲ್ಲಿ ಕ್ಷಣ ಕ್ಷಣಕ್ಕೂ ರಷ್ಯಾ ನಡುವಿನ ಯುದ್ಧ ತಾರಕಕ್ಕೇರುತ್ತಿದೆ. ಯಾವ ಕ್ಷಣದಲ್ಲಿ ಎಲ್ಲಿ ಬಾಂಬ್ ಬೀಳುತ್ತೋ, ಉಕ್ರೇನ್ ನಾಶವಾಗುತ್ತೋ ಎನ್ನುವಂತ ಭೀತಿ ಕಾಡುತ್ತಿದೆ. ಈ ನಡುವೆಯೂ ಈವರೆಗೆ ಕರ್ನಾಟಕದ 10 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಇರೋದಾಗಿ ಹೇಳಲಾಗುತ್ತಿತ್ತು.ಆದ ಈಗ ಉಕ್ರೇನ್ ನಲ್ಲಿ ಕರ್ನಾಟಕದ 91 ವಿದ್ಯಾರ್ಥಿಗಳು ಎಂ ಬಿ ಬಿ ಎಸ್ ವ್ಯಾಸಂಗ ಮಾಡುತ್ತಿರೋದಾಗಿ ಸರ್ಕಾರ ತಿಳಿಸಿದೆ.