ಬೆಂಗಳೂರು: ಬೆಂಗಳೂರಿನ ಮಾರತ್ತಹಳ್ಳಿಯ ದೇವರಬಿಸನಹಳ್ಳಿಯಲ್ಲಿ ಮದ್ಯದ ದಾಸನಾಗಿದ್ದ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದ ಘಟನೆ ನಡೆದಿದೆ.
70 ವರ್ಷದ ಯಮುನಮ್ಮ ಕೊಲೆಯಾದ ಮಹಿಳೆ. ಕುಡಿಯಲು ಹಣ ನೀಡುವಂತೆ ವೃದ್ಧ ತಾಯಿಯನ್ನು ಮಗ ಅಂಬರೀಶ್ ಪೀಡಿಸುತ್ತಿದ್ದ.ಇದೇ ಕಾರಣಕ್ಕೆ ತಾಯಿ-ಮಗನ ನಡುವೆ ಜಗಳವಾಗಿದೆ.
ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಮಗ ಅಂಬರೀಶ್, ತಾಯಿಯ ಕೆನ್ನೆಗೆ ಬಾರಿಸಿದ್ದಾನೆ. ಗಂಭೀರವಾಗಿ ಏಟು ಬಿದ್ದ ಪರಿಣಾಮ ತಾಯಿ ಕುಸಿದು ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.