News Kannada
Friday, December 02 2022

ಬೆಂಗಳೂರು ನಗರ

ದ್ವಿಚಕ್ರ ವಾಹನಕ್ಕೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ: ವೃದ್ಧ ಸಾವು

Photo Credit : IANS

ಬೆಂಗಳೂರು :  ಬಿಬಿಎಂಪಿ ಕಸದ ಲಾರಿಗೆ ಮತ್ತೊಬ್ಬರನ್ನ ಬಲಿ ಪಡೆದಿದೆ. 10 ದಿನದ ಹಿಂದಷ್ಟೇ ರಸ್ತೆ ದಾಟುತ್ತಿದ್ದ ಶಾಲಾ ಬಾಲಕಿ ಅಕ್ಷಯ ಮೇಲೆ ಕಸದ ಲಾರಿ ಹರಿದು ಆಕೆಯ ಸಾವಿಗೆ ಕಾರಣವಾಗಿತ್ತು, ಈ ಕಹಿ ಘಟನೆ ಮಾಟುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.

ಗುರುವಾರ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರ ಮೇಲೆ ಕಸದ ಲಾರಿ ಹರಿದಿದ್ದು, ಸ್ಥಳದಲ್ಲೇ ದರ್ಮಣಕ್ಕೀಡಾಗಿದ್ದಾರೆ. ರಾಮಯ್ಯ(60) ಮೃತರು. ದ್ವಿಚಕ್ರ ವಾಹನದಲ್ಲಿ ರಾಮಯ್ಯ ಹೋಗುತ್ತಿದ್ದರು. ಬೇಗೂರು ಕ್ರಾಸ್ ಬಳಿ ರೇವ ಯೂನಿರ್ವಸಿಟಿ ಮುಂಭಾಗ ಕಸದ ಲಾರಿ ಡಿಕ್ಕಿ ಹೊಡೆದಿದ್ದು, ಕೆಳಕ್ಕೆ ಬಿದ್ದ ರಾಮಯ್ಯ ಅವರ ಮೇಲೆ ಲಾರಿಯ ಚಕ್ರ ಹರಿದಿದೆ. ಅಪಘಾತದ ಭೀಕರತೆಗೆ ರಾಮಯ್ಯರ ದೇಹ ಛಿದ್ರಗೊಂಡಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

ಮಾ.21ರಂದು ಶಾಲೆಯಿಂದ ಮನೆಗೆ ತೆರಳುತ್ತಿದ್ದ 12 ವರ್ಷದ ಬಾಲಕಿ ಅಕ್ಷಯ ಬಿ. ನರಸಿಂಹಮೂರ್ತಿ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದಿತ್ತು. ಸ್ಥಳದಲ್ಲೇ ಅಕ್ಷಯ ಮೃತಪಟ್ಟಿದ್ದಳು. ಈ ಘಟನೆ ಖಂಡಿಸಿ ಬಿಬಿಎಂಪಿ ವಿರುದ್ಧ ಮೃತಳ ಕುಟುಂಬಸ್ಥರು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ದುರ್ಘಟನೆ ಇನ್ನೂ ಹಸಿಯಾಗೇ ಇದೆ, ಇದೀಗ ಮತ್ತೊಂದು ದುರಂತ ಸಂಭವಿಸಿದೆ.

See also  ಯಶಸ್ವಿಯಾದ ಸಾರಿಗೆ ನೌಕರರ ಹಾಗೂ ಸರ್ಕಾರದ ಸಭೆ; ಇಂದಿಗೆ ಮುಕ್ತಾಯಗೊಂಡ ಮುಷ್ಕರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು