News Kannada
Monday, December 05 2022

ಬೆಂಗಳೂರು ನಗರ

ಮಗನ ಸಾಧನೆಯನ್ನು ಬಯಸಿ ಅಪ್ಪನು ಬರೆದ ಕೃತಿ ‘ಪ್ರಭಾರಿ’ : ಸಾಹಿತಿ ಜೋಗಿ

Photo Credit :

ಬೆಂಗಳೂರು: ತಂದೆ ಹಾಗು ಮಗ ಕತೆಗಳ ಮುಖೇನ ಮಾತಾಡಿರುವಂತಹ ಸಂಭಾಷಣೆಗಳು ಇಲ್ಲಿವೆ. ಅದು ತಂದೆ ಮಗನ ವಿಚಾರವಂತಿಕೆಯನ್ನು ತೋರಿಸುತ್ತದೆ ಎಂದು ಹಿರಿಯ ಸಾಹಿತಿ ಜೋಗಿ ಹೇಳಿದರು.

ಬೆಂಗಳೂರಿನ ಸ್ನೇಹ ಬುಕ್ ಹೌಸ್ ವತಿಯಿಂದ ಭಾನುವಾರದಂದು ಹಮ್ಮಿಕೊಂಡಿದ್ದ ಲೇಖಕ ಪ್ರಮೋದ ಮೋಹನ ಹೆಗಡೆ ಅವರ ʼಮೈಸೂರ್ ಪಾಕ್ ಹುಡುಗʼ ಹಾಗು ಲೇಖಕ ಮೋಹನ ಭಾಸ್ಕರ ಹೆಗಡೆ ಅವರ ‘ಪ್ರಭಾರಿ’  ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ತಂದೆ ಮಗನ ವಿಚಾರವನ್ನು ಒಬ್ಬರನೊಬ್ಬರಿಗೆ ತಿಳಿಸುವ ಕೆಲಸವನ್ನು ಈ ಕೃತಿಯು ಮಾಡುತ್ತದೆ. ಇಲ್ಲಿನ ಕತೆಗಳು ಸಹಾನೂಭೂತಿಯಿಂದ ಹುಟ್ಟಿದವು ಎಂದರು.  ವ್ಯಕ್ತಿ ತನ್ನ ಬದುಕಿನ ದುರಂತವನ್ನು ಕಾಣುವುದು ತನ್ನ ಜೊತೆಗಿದ್ದ ವ್ಯಕ್ತಿಯ ಸಾಧನೆಯನ್ನು ನೋಡಿದಾಗ. ಕೇವಲ ಆತ ಬೆಳೆಯುದಲ್ಲದೇ ಆತನ ಜೊತೆಗಾರನನ್ನು ಬೆಳೆಸುವುದು  ಮುಖ್ಯ. ಇಲ್ಲಿ ತಂದೆ ಮಗನ ವಿಚಾರದಲ್ಲಿ ಅಂತಹ ಸಾಧನೆಯನ್ನು ಕಾಣಬಹುದು ಎಂದರು.

ಲೇಖಕಿ ಡಾ. ವಸುಂಧರಾ ಭೂಪತಿ  ಅವರು ಮಾತನಾಡಿ, ಸಾಹಿತ್ಯದ ಒಂದೇ ಪ್ರಕಾರವನ್ನು ತಂದೆ ಮಗ ಇಬ್ಬರು ಬರೆದಿರುವುದು ವಿಶಿಷ್ಟ. `ಪ್ರಬಾರಿ’ ಕತಾಸಂಕಲನವು ಪ್ರತಿಯೊಂದು ವಿಚಾರಗಳನ್ನು ವಿವರಿಸುತ್ತದೆ. ಎಲ್ಲಾ ರೀತಿಯ ವಿಚಾರಧಾರೆಗಳಿಗೆ ಇಲ್ಲಿ ಪ್ರಾಮುಖ್ಯತೆ ನೀಡಿದ್ದು,  ಭಾಷೆ ಮತ್ತು ಭಾವನೆ ಇಲ್ಲಿ ಪ್ರಮುಖವೆನ್ನಿಸುತ್ತದೆ ಎಂದರು.

ವಿಶೇಷ ಆಯುಕ್ತರು ಬಿಬಿಎಂಪಿ ಬೆಂಗಳೂರು ಡಾ. ಹರೀಶ ಕುಮಾರ್  ಕೆ ಮಾತನಾಡಿ,  ಸಾಹಿತ್ಯದ ಕೃಷಿಯನ್ನು ನಾವು ಬೇರೆ ಬೇರೆ ರೀತಿಯಲ್ಲಿ ಮಾಡುತ್ತೇವೆ. ಆದರೆ ಒಂದೇ ಮನಸ್ಕರನ್ನು ಒಂದೇ ತಟ್ಟೆಯಲ್ಲಿ ಹಾಕಿ ಬೆಳೆಸುವುದು ಅಂದರೆ ಸುಲಭವಲ್ಲ. ಅಂತಹ ಕೆಲಸವನ್ನು ಗೋಪಾಲಕೃಷ್ಣ ಕುಂಟಿನಿ ಮಾಡುತ್ತಿದ್ದಾರೆ. ಇಂತಹ ಹಿರಿಯ ಸಾಹಿತಿಗಳ ಪ್ರೇರಣೆ ಯುವಕರಿಗೆ ಬಹು ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಲ್ಕೋ ಸಂಸ್ಥಾಪಕ, ರಾಮೋನ್ ಮ್ಯಾಗಸ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸೌರ ವಿಜ್ಞಾನಿ  ಡಾ. ಹರೀಶ ಹಂದೆ ವಹಿಸಿದರು. ಪತ್ರಕರ್ತ ಹಾಗೂ ಕೃಷಿಕ ಗೋಪಾಲಕೃಷ್ಣ ಕುಂಟಿನಿ, ಕೃತಿಯ ಕರ್ತೃಗಳಾದ ಪ್ರಮೋದ ಮೋಹನ ಹೆಗಡೆ ಹಾಗು ಮೋಹನ ಭಾಸ್ಕರ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿ‌ದ್ದರು.

ಕಾರ್ಯಕ್ರಮವನ್ನು ಪತ್ರಕರ್ತೆ, ಕತತೆಗಾರ್ತಿ  ಪ್ರಿಯಾ ಕೆರ್ವಾಶೇ ನಿರೂಪಿಸಿದರು. ಸ್ವಾಗತವನ್ನು ಸ್ನೇಹ ಬುಕ್ ಹೌಸ್ ಸಂಚಾಲಕ ಕೆ.ಬಿ.ಪರಶಿವಪ್ಪ ನೆರವೇರಿಸಿದರು

See also  ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ದಿನೇಶ್ ಗುಂಡೂರಾವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು