News Kannada
Wednesday, November 30 2022

ಬೆಂಗಳೂರು ನಗರ

ಯಲಹಂಕ ರೈಲು ನಿಲ್ದಾಣಕ್ಕೆ ಹುಸಿ ಬಾಂಬ್‌ ಕರೆ ಮಾಡಿದ ಬಾಲಕ! - 1 min read

Photo Credit :

ಬೆಂಗಳೂರು : ಪಬ್‌ ಜಿ ಆಟದ ಗೀಳಿಗೆ ಬಿದ್ದಿದ್ದ 12 ವರ್ಷದ ಬಾಲಕನೋರ್ವ ಯಲಹಂಕ ರೈಲು ನಿಲ್ದಾಣದ ಕಂಟ್ರೋಲ್‌ ರೂಂಗೆ ಹುಸಿ ಬಾಂಬ್‌ ಕರೆ ಮಾಡಿ ಸಿಕ್ಕಿ ಬಿದ್ದಿದ್ದಾನೆ.

ಬಾಗಲೂರು ವಿನಾಯಕ ನಗರದ ನಿವಾಸಿ 12 ವರ್ಷದ ಬಾಲಕ ಪಬ್‌ ಜಿ ಆಟದ ಹುಚ್ಚು ಬೆಳೆಸಿಕೊಂಡಿದ್ದ.ಸದಾ ಪಾಲಕರ ಮೊಬೈಲ್‌ನಲ್ಲಿ ಆಟವಾಡುತ್ತಿದ್ದ. ಪೋಷಕರು ಇತ್ತೀಚೆಗೆ ಸ್ಮಾರ್ಟ್‌ಫೋನ್‌ ಕೊಡದಿದ್ದರೂ ಅವರ ಕಣ್ತಪ್ಪಿಸಿ ಸ್ನೇಹಿತನೊಂದಿಗೆ ಪಬ್‌ ಜಿ ಆಡುತ್ತಿದ್ದ. ಬಾಲಕನ ಸ್ನೇಹಿತ ಮಾ.30ರಂದು 2 ಗಂಟೆಗೆ ಯಲಹಂಕ ರೈಲು ನಿಲ್ದಾಣದಿಂದ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು.

ಸ್ನೇಹಿತ ಹೋದರೆ ತನಗೆ ಆಡಲು ಯಾರೂ ಇರುವುದಿಲ್ಲ ಎಂದು ಬೇಸರಗೊಂಡಿದ್ದ. ಹೇಗಾದರೂ ಮಾಡಿ ಸ್ನೇಹಿತ ರೈಲಿನಲ್ಲಿ ಹೋಗುವುದನ್ನು ತಪ್ಪಿಸಬೇಕೆಂದು ಚಿಂತಿಸಿ, ಮಾ.30ರಂದು ಮಧ್ಯಾಹ್ನ 11.30ರಲ್ಲಿ ತಾಯಿಯ ಕೀ ಪ್ಯಾಡ್‌ ಮೊಬೈಲ್‌ನಿಂದ ಯಲಹಂಕ ರೈಲ್ವೇ ಕಂಟ್ರೋಲ್‌ ರೂಂಗೆ ಕರೆ ಮಾಡಿ, “ಯಲಹಂಕ ರೈಲು ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದಾರೆ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದ.

ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಪೊಲೀಸರು ಹಾಗೂ ಭದ್ರತಾ ಸಿಬಂದಿ, ಬಾಂಬ್‌ ಹಾಗೂ ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲಿಸಿದ್ದಾರೆ. ಆದರೆ ಬಾಂಬ್‌ ಪತ್ತೆಯಾಗಿರಲಿಲ್ಲ. ಬಳಿಕ ಕರೆ ಬಂದಿದ್ದ ಮೊಬೈಲ್‌ ನಂಬರ್‌ ಅನ್ನು ಪತ್ತೆ ಹಚ್ಚಿದಾಗ ಬಾಲಕನ ಪೋಷಕರ ಸುಳಿವು ಸಿಕ್ಕಿತ್ತು. ಕೂಡಲೇ ಅವರ ಮನೆಗೆ ತೆರಳಿ ವಿಚಾರಿಸಿದಾಗ ಬಾಲಕ ಕೃತ್ಯ ಬೆಳಕಿಗೆ ಬಂದಿದೆ.

 

See also  ಅನಧಿಕೃತ ಫ್ಲೆಕ್ಸ್- ಜಾಹೀರಾತಿಗೆ ಅವಕಾಶ ಇಲ್ಲ: ಪಾಲೀಕೆ ಆಯುಕ್ತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು