ಬೆಂಗಳೂರು, ಮೇ.23: ಲೋಕಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ದೇಶದ ಪ್ರತಿಯೊಬ್ಬ ನಾಗರಿಕನು ಅಹಿಂಸಾ ಮಾರ್ಗವನ್ನು ಅನುಸರಿಸುವ ಮೂಲಕ ಶಾಂತಿ ಸಮಾಜ ನಿರ್ಮಾಣ ಮಾಡಲು ಮುನ್ನಡೆಯಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ನಗರದ ಚಿಕ್ಕಪೇಟೆಯಲ್ಲಿರುವ ಉದಯ ಭಾನು ಸಾರ್ವಜನಿಕ ಆಟದ ಮೈದಾನದಲ್ಲಿ ಜೈನ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ಸದ್ಗುರು ಸಮಾಗಮ, ರಾಜೋಹರನ್ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಅವರು ಮಾತನಾಡಿದರು.
ಜೈನ ಸಮಾಜವು ಮಾನವ ಸೇವೆಯ ಜೊತೆಗೆ ಅನೇಕ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ನೈತಿಕ, ದತ್ತಿ ಕಾರ್ಯಗಳ ಮೂಲಕ ಜೈನ ಧರ್ಮದ ಕೊನೆಯ ತೀರ್ಥಂಕರರಾದ ಮಹಾವೀರ ಸ್ವಾಮಿಗಳ “ಬದುಕು ಮತ್ತು ಬದುಕಲು ಬಿಡಿ” ಎಂಬ ಅಮರ ಸಂದೇಶವನ್ನು ಈಡೇರಿಸುತ್ತಿದೆ ಎಂದರು.
ಜೈನ ಸಮಾಜ ಗುರು ಮಹಾರಾಜರ ಪ್ರವಚನಗಳ ವಚನಗಳಿಂದ ಪ್ರೇರಣೆ ಪಡೆದು ಮಾನವ ಸೇವೆಯನ್ನು ಮಾಡುತ್ತಿರುವುದು ಸಂತಸದ ಸಂಗತಿ. ಧೀಕ್ಷೆ ಪಡೆದವರು ಕ್ರೋಧ, ಅಹಂಕಾರ, ಮೋಸ, ಆಸೆ ಇತ್ಯಾದಿಗಳನ್ನು ಜಯಿಸುತ್ತಿದ್ದಾರೆ. ಈ ಆದರ್ಶಗಳನ್ನು ಅನುಸರಿಸಲು, 11 ಜನರು ರಾಜೋಹರಣ ಉತ್ಸವದ ಕಾರ್ಯಕ್ರಮದಲ್ಲಿ ದೀಕ್ಷೆ ತೆಗೆದುಕೊಳ್ಳುತ್ತಿರುವುದು ಅತ್ಯಂತ ಪುಣ್ಯದ ಕೆಲಸವಾಗಿದೆ ಎಂದರು.
ಅಹಿಂಸೆಯ ಬೆಳಕನ್ನು ಜಾಗೃತಗೊಳಿಸುವ ಮಹತ್ತರವಾದ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಅಹಿಂಸೆ ತತ್ವ ಪಾಲಿಸುವ ಮೂಲಕ ಶಾಂತಿ ಸಮಾಜ ನಿರ್ಮಿಸಬಹುದು. ಭಾರತದಲ್ಲಿ ಇಂದು ಕೆಲವು ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಅಹಿಂಸೆ ಮಾರ್ಗವನ್ನು ಅನುಸರಿಸಬೇಕು.
ವಸುಧೈವ ಕುಟುಂಬ (ಬ್ರಹ್ಮಾಂಡ ಪರಿವಾರ), ಸರ್ವೇ ಭವಂತು ಸುಖಿನೋ, ಸರ್ವೇ ಸಂತುಂ, ಮಾರ್ಗವನ್ನು ಅನುಸರಿಸಬೇಕಾಗಿದೆ. ಲೋಕಕಲ್ಯಾಣ ಮತ್ತು ವಿಶ್ವಶಾಂತಿಯನ್ನು ಮುನ್ನಡೆಸಲು ರಾಷ್ಟ್ರವ್ಯಾಪಿ ಅಹಿಂಸಾ ಮಾರ್ಗವನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ಪರಮ ಪೂಜ್ಯ ಆಚಾರ್ಯ ಪ್ರವರ್ ವರ್ಧಮಾನ್ ಸಾಗರ್ ಸುರೀಶ್ವರ್ ಮಹಾರಾಜ್ ಮತ್ತು ಪರಮ ಪೂಜ್ಯ ಆಚಾರ್ಯ ಶ್ರೀಮದ್ ವಿಜಯ್ ನರರತ್ನ ಸುರೀಶ್ವರ್ ಮಹಾರಾಜ್ ಸಾಹಿಬ್, ಕರ್ನಾಟಕ ಸರ್ಕಾರದ ಮಾನ್ಯ ಸಚಿವರಾದ ಶ್ರೀ ಬಿ.ಸಿ. ನಾಗೇಶ್, ಸಂಸದ ಶ್ರೀ ಪಿ.ಸಿ. ಮೋಹನ್, ಶಾಸಕ ಉದಯ ಗರುಣಾಚಾರ್, ಶಾಸಕ ಶ್ರೀ ಜಮೀರ್ ಅಹಮದ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
PHOTO AND REPORT CREDIT : G.Mohan, Photojournalist, Bengaluru