News Kannada
Saturday, January 28 2023

ಬೆಂಗಳೂರು ನಗರ

ಸಿಲಿಕಾನ್ ಸಿಟಿಯಲ್ಲಿ ಕೆಂಪು ಬಣ್ಣದಲ್ಲಿ ‘ಸಾರಿ’ ಅಂತ ಬರೆದು ಅಪರಿಚಿತನ ಹುಚ್ಚಾಟ

Photo Credit :

ಬೆಂಗಳೂರು: ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಕ್ಷಮಿಸು (Sorry) ಅಂತ ಬರೆದಿದ್ದಾನೆ. ಬರೀ ಶಾಲೆ ಅಷ್ಟೇ ಅಲ್ಲ, ಅಲ್ಲೇ ಪಕ್ಕದಲ್ಲಿದ್ದ ಮನೆಯ ಕಾಂಪೌಂಡ್, ಮೆಟ್ಟಿಲ ಮೇಲೆಲ್ಲಾ ‘Sorry’ ಎಂದು ಆತ ಬರೆದಿದ್ದಾನೆ. ಕಾಲೇಜ್ ಮುಂದಿನ ರಸ್ತೆ ಮೇಲೂ ಸಾರಿ ಅಂತ ನೂರಾರು ಸಾರಿ ಬರೆದಿದ್ದಾನೆ. ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಆಘಾತವಾಗಿದ್ದು, ಇದು ಯಾರು ಯಾರಿಗಾಗಿ ಬರೆದ ಬರಹ ಎಂದು ಕುತೂಹಲಗೊಂಡಿದ್ದಾರೆ.

ಆ ಅಪರಿಚಿತ ವ್ಯಕ್ತಿ ಇಡೀ ರಸ್ತೆ ಮೇಲೆಲ್ಲ ಸಾರಿ ಅಂತ ಬರೆದಿದ್ದಾನೆ. ಆತ ಶಾಲೆ ಕಾಂಪೌಂಡ್, ರಸ್ತೆ, ಎಲ್ಲಾ ಕಡೆ sorry ಅಂತಾ ಬರೆದಿದ್ದಾನೆ. ಬೇರೆ ಯಾವುದೇ ಬಣ್ಣ ಬಳಸದೇ, ಕೇವಲ ಕೆಂಪು ಬಣ್ಣದಲ್ಲಿ ಬೇಕಾಬಿಟ್ಟಿಯಾಗಿ, ಲೆಕ್ಕವಿಲ್ಲದಷ್ಟು ಸಲ Sorry ಅಂತ ಬರೆದಿದ್ದಾನೆ.

ಸ್ಥಳೀಯರು ಹೇಳುವ ಪ್ರಕಾರ ರಾತ್ರಿ 11 ರಿಂದ 12 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಡ್ಯೂಕ್ ಬೈಕ್ ನಲ್ಲಿ ಇಬ್ಬರು ಯುವಕರು ಫುಡ್ ಡಿಲವರಿ ಬ್ಯಾಗ್ ನೊಂದಿಗೆ ಬಂದಿದ್ದರು. ಅವರೇ ಸ್ಪ್ರೇ ಮೂಲಕ SORRY ಎಂದು ಬರೆದಿದ್ದಾರೆ ಎನ್ನಲಾಗಿದೆ. ಇದು ಪಾಗಲ್ ಪ್ರೇಮಿಗಳದ್ದೇ ಕೃತ್ಯ ಅಂತ ಸ್ಥಳೀಯರು ಶಂಕಿಸಿದ್ದಾರೆ.

ಬೆಳಗ್ಗೆ ಎದ್ದು ರಸ್ತೆ, ಶಾಲೆ ನೋಡಿದ ಸ್ಥಳೀಯರಿಗೆ ಶಾಕ್ ಆಗಿದೆ. ಬಳಿಕ ಸ್ಛಳೀಯರು ಹಾಗೂ ಕಾಲೇಜ್ ಪ್ರಿನ್ಸಿಪಾಲ್ ಕಾಮಾಕ್ಷಿಪಾಳ್ಯ ಠಾಣೆಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬರಹಗಳನ್ನು ಪರಿಶೀಲಿಸಿದ್ದಾರೆ.

ಇನ್ನು ಸಾರಿ ಅಂತ ಊರ ತುಂಬೆಲ್ಲಾ ಬರೆದವನ ಬಗ್ಗೆ ಸ್ಥಳೀಯರಷ್ಟೇ ಅಲ್ಲ, ಪೊಲೀಸರು ತಲೆ ಕೆಡಿಸಿಕೊಂಡಿದ್ದಾವೆ. ಹಾಗಾದ್ರೆ ಇದು ಯಾರ ಕೆಲಸ? ಸಾರಿ ಕೇಳಿದವ ಯಾರು? ಯಾಕಾಗಿ ಸಾರಿ ಕೇಳಿದ? ಯಾರಿಗೆ ಸಾರಿ ಕೇಳಿದ? ಕೊನೆಗೂ ಆ ವ್ಯಕ್ತಿ ಈ ವ್ಯಕ್ತಿಯನ್ನು ಕ್ಷಮಿಸಿದನಾ? ಅಂತ ತಲೆ ಕೆಡಿಸಿಕೊಂಡಿದ್ದಾರೆ. ಇದೀಗ Sorry ಅಂತ ಬರೆದವನ ಹಿಂದೆ ಪೊಲೀಸರು ಬಿದ್ದಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಿ ಅಪರಿಚಿತ ವ್ಯಕ್ತಿಗೆ ಹುಡುಕಾಟ ನಡೆಸಿದ್ದಾರೆ.

ಈ ಸಾರಿ ಬರಹಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಯಾವುದೋ ಭಗ್ನ ಪ್ರೇಮಿಯದ್ದೇ ಕೆಲಸ ಎಂದಿರುವ ನೆಟ್ಟಿಗರು, ಇದು ಸ್ಪೆಷಲ್ ಪ್ರೀತಿ, ವಿಶೇಷ ಲವ್ ಲೆಟರ್ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

See also  ಭೀಕರ ಅಪಘಾತ: ಒಂದೇ ಕುಟುಂಬದ ಏಳು ಮಂದಿ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು