News Kannada
Tuesday, October 04 2022

ಬೆಂಗಳೂರು ನಗರ

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ 7 ಮಂದಿ ಬಂಧನ - 1 min read

7 arrested for selling ganja
Photo Credit : G Mohan

ಬೆಂಗಳೂರು: ಬುಲೆರೊ ಗೂಡ್ಸ್‌ ವಾಹನದ ಕೆಳಭಾಗದಲ್ಲಿ ಬಾಕ್ಸ್‌ ಮಾಡಿಕೊಂಡು ಬೀದರ್‌ನಿಂದ ಗಾಂಜಾ ತಂದು ನಗರದಲ್ಲಿ ಪೆಡ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಗೂರು ಪೊಲೀಸರು ಬೇಧಿಸಿದ್ದು, ಒಂದು ಕೋಟಿ ಮೌಲ್ಯದ 175 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಂಧಿತರು, ಕುಣಿಗಲ್‌ ತಾಲೂಕಿನ ಕೆ.ಆರ್‌.ಅರವಿಂದ್‌(26), ತಾವರೆಕೆರೆ ನಿವಾಸಿ ಪವನ್‌ ಕುಮಾರ್‌ (27), ಮಂಗಳೂರಿನ ಅಮ್ಜದ್‌ ಇತಿ ಯಾರ್‌ ಅಲಿಯಾಸ್‌ ಇಮ್ರಾನ್‌ ಅಲಿಯಾಸ್‌ ಇರ್ಷಾದ್‌ (27) ಈ ಆರೋಪಿಗಳ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಬೀದರ್‌ನ ಭಾಲ್ಕಿ ಪ್ರಭು(27), ದಕ್ಷಿಣ ಕನ್ನಡದ ನಜೀಮ್‌ (26) ಮತ್ತು ಆಂಧ್ರಪ್ರದೇಶದ ಭೂಪಾಲ ಪಟ್ಟಣಂನ ಪತ್ತಿ ಸಾಯಿ ಚಂದ್ರ ಪ್ರಕಾಶ್‌ (19) ಆಗಿದ್ದಾರೆ.

ಈ ಆರೋಪಿಗಳ ವಿರುದ್ಧ ಆಂಧ್ರಪ್ರದೇಶ, ಬೆಂಗಳೂರು ನಗರ, ಗ್ರಾಮಾಂತರದ ವಿವಿಧ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ, ಎನ್‌ಡಿಪಿಎಸ್‌ ಹಾಗೂ ದರೋಡೆ ಸೇರಿ ಹಲವು ಅಪರಾಧ ಪ್ರಕರಣಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳು ಜೈಲಿಗೆ ಹೋದಾಗ ಪರಸ್ಪರ ಪರಿಚಯವಾಗಿ, ದೊಡ್ಡ ಮಟ್ಟದಲ್ಲಿ ಮಾದಕ ವಸ್ತು ಮಾರಾಟ ಜಾಲ ವಿಸ್ತರಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

 

See also  ಟಾಟಾ ನಗರದಿಂದ ಕರ್ನಾಟಕ ತಲುಪಿದ 10ನೇ ಆಕ್ಸಿಜನ್ ಎಕ್ಸ್‌ಪ್ರೆಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು