News Kannada
Tuesday, September 27 2022

ಬೆಂಗಳೂರು ನಗರ

ಬೆಂಗಳೂರು: ಪಿಎಸ್ಐ ಹಗರಣದ ಸುಳಿವು ಮೊದಲೇ ಸಿಕ್ಕಿತ್ತು ಎಂದ ಭಾಸ್ಕರ ರಾವ್ - 1 min read

Bengaluru: Bhaskar Rao says he had already got a clue about the PSI scam
Photo Credit : Facebook

ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಬಂಧಿಸಲು ಕಾರಣವಾಗಿದ್ದ ಪಿಎಸ್ಐ ಹಗರಣದ ಕುರಿತು ನನಗೆ ಮೊದಲೇ ವಾಸನೆ ಇತ್ತು ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ.

ಉಡುಪಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬೆಂಗಳೂರು ಸಿಟಿ ಪೋಲಿಸ್ ಕಮಿಷನರ್ ಆಗಿರುವಾಗ ಅಮೃತ್ ಪೌಲ್ ಕಮಿಷನರ್ ಆಗುತ್ತಾರೆ ಎಂಬ ಸುದ್ದಿ ಪ್ರಚಲಿತದಲ್ಲಿತ್ತು. ಅಮೃತ್ ಪೌಲ್ ಆಗಾಗಾ ಮುಖ್ಯಮಂತ್ರಿಯವರ ಮನೆಗೆ ಬರುವುದನ್ನು ನಾನು ಗಮನಿಸಿದ್ದೆ.

ಆಗಲೇ ಇದು ಹಗರಣ ಎಂಬುವುದಾಗಿ ನನಗೆ ಮೊದಲೇ ಗೊತ್ತಿತ್ತು. ರಾಜ್ಯಪಾಲರ ಬಳಿ ಈ ವಿಷಯ ಕೊಂಡೊಯ್ದ ಮೊದಲ ರಾಜಕೀಯ ಪಕ್ಷ ಆಮ್ ಆದ್ಮಿ. ತನಿಖೆ ಆಗುವವರೆಗೂ ಪರೀಕ್ಷೆ ಮಾಡುವುದಿಲ್ಲ ಎಂಬುವುದು ತಪ್ಪು ನೀತಿ, ನೀವು ಯುವಜನರಿಗೆ ಮೋಸ ಮಾಡುತಿದ್ದೀರಿ. ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆಯನ್ನು ನಡೆಸಿ ಎಂದರು

ಸಿಐಡಿ ಒಳಗೆ ಹೋದ ಮೇಲೆ ಹೋಂ ಮಿನಿಸ್ಟರ್ ಮತ್ತು ಸಿಎಂ ತನಿಖಾಧಿಕಾರಿ ಆಗುತ್ತಾರೆ.ಇದು ನ್ಯಾಯಾಂಗದಲ್ಲಿ ತನಿಖೆ ಆಗಬೇಕು ಎಂದು ನಾನು ಮೊದಲೇ ಆಗ್ರಹ ಮಾಡಿದ್ದೇನು. ನ್ಯಾಯಾಂಗ ತನಿಖೆ ಆರಂಭ ಆದ 24 ಗಂಟೆಗಳಲ್ಲಿ ಅಮೃತ್ ಪೌಲ್ ಬಂಧನವಾಗಿದೆ ಎಂದರು

See also  ಅಡ್ಡಪರಿಣಾಮಗಳಿಲ್ಲದ ಔಷಧರಹಿತ ಚಿಕಿತ್ಸೆ ಅಗತ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು