News Kannada
Thursday, October 05 2023
ಬೆಂಗಳೂರು ನಗರ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಘೋಷಣೆ

UP campaign committee announced for BBMP elections
Photo Credit : News Kannada

ಬೆಂಗಳೂರು, ಆ. 1: ಪಾಲಿಕೆ ಚುನಾವಣೆ ಯಾವುದೇ ಸಂಧರ್ಭದಲ್ಲಿ ಘೋಷಣೆ ಆಗಬಹುದು, ಇದಕ್ಕೆ ಪೂರ್ವ ತಯಾರಿಯನ್ನು ಪ್ರಾರಂಭಿಸಿರುವ ಆಮ್ ಆದ್ಮಿ ಪಕ್ಷ ಬಿಬಿಎಂಪಿ ಚುನಾವಣೆಗೆ ಭಾಸ್ಕರರಾವ್ ಅವರ ನೇತೃತ್ವದಲ್ಲಿ ಪ್ರಚಾರ ಸಮಿತಿಯನ್ನು ಘೋಷಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.

ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. “ಈ ಸಮಿತಿಯು ಪಕ್ಷವನ್ನು ಗೆಲ್ಲಿಸಿ ಬೆಂಗಳೂರಿನಲ್ಲಿ ಒಂದು ಜನಪರ ಮತ್ತು ಪ್ರಾಮಾಣಿಕ ಪಾಲಿಕೆಯನ್ನು ಸ್ಥಾಪಿಸುತ್ತದೆ ಎಂದು ಪಕ್ಷಕ್ಕೆ ಸಂಪೂರ್ಣ ನಂಬಿಕೆಯಿದೆ” ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಎಪಿ ರಾಜ್ಯ ಉಪಾಧ್ಯಕ್ಷ ಮತ್ತು ಬಿಬಿಎಂಪಿ ಪ್ರಚಾರ ಸಮಿತಿ ಅಧ್ಯಕ್ಷ ಭಾಸ್ಕರ್ ರಾವ್‌ “ಜನರು ಪಾವತಿಸುವ ತೆರಿಗೆ ದುಡ್ಡು ಜನರ ಉದ್ಧಾರಕ್ಕೆ ಬಳಸಬೇಕೇ ಹೊರತು ರಾಜಕಾರಣಿಗಳ ಏಳೆಗೆ ಅಲ್ಲ ಎಂಬುದನ್ನು ನಾವು ನಂಬಿದ್ದೇವೆ. ಸುಸಜ್ಜಿತ ಶಾಲೆಗಳು, ಆಸ್ಪತ್ರೆಗಳು, ಉತ್ತಮ ರಸ್ತೆ, ನೀರು, ವಿದ್ಯುತ್‌ ಮತ್ತು ಬೆಳವಣಿಗೆಗೆ ಪೂರಕವಾದ ಅವಕಾಶಗಳು – ಜನಜೀವನಕ್ಕೆ ಬೇಕಾದ್ದು ಇಷ್ಟೇ, ಇದು ಜನರ ಹಕ್ಕೂ ಕೂಡಾ. ಆಪ್ ದೇಶಕ್ಕೆ ಒಂದು ಮಾದರಿಯನ್ನು ತೋರಿಸಿದೆ, ಮತ್ತು ಅದನ್ನು ಮಾಡಿ ತೋರಿಸಿದೆ, ಬೇರೆ ಪಕ್ಷಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗಿವೆ. ಎಂದರು

“ಕಳೆದ ವಾರವಷ್ಟೇ ಅಭ್ಯರ್ಥಿ ಶೋಧನಾ ಸಮಿತಿ ಯನ್ನು ರಚಿಸಿ ಘೋಷಣೆ ಮಾಡಿದ್ದೆವು, ಮಿಸ್ ಕಾಲ್ ಮತ್ತು ಈಮೇಲ್ ಮೂಲಕ ಸಂಪರ್ಕ ಮಾಡುವ ವ್ಯವಸ್ಥೆ ಕಲ್ಪಿಸಿದ್ದವು, ಇದರ ಮೂಲಕ 600ಕ್ಕೂ ಹೆಚ್ಚು ಜನರು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಎಎಪಿ ಟಿಕೆಟ್ ನಲ್ಲಿ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ. ವಾರ್ಡ್ ಮೀಸಲಾತಿ ಪ್ರಕಟಣೆಗೂ ಮುನ್ನವೇ ಇಷ್ಟು ಆಸಕ್ತರು ಬಂದಿರುವುದು, ಮೀಸಲಾತಿ ಘೋಷಣೆಯ ನಂತರ ಇನ್ನಷ್ಟು ಆಸಕ್ತರು ಬರುವುದು ಖಚಿತವಾಗಿ ಕಾಣುತ್ತದೆ’ ಎಂದು ಹೇಳಿದರು.

ಜನಸಂಪರ್ಕ ಮತ್ತು ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚುಂದ್ರು ಮಾತನಾಡಿ “ಜನರು ಒಂದೆಡೆ 40% ಕಮಿಷನ್‌ ಸರ್ಕಾರದಿಂದ ಬೇಸತ್ತಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಆಕ್ರೋಶಗೊಂಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಪರ್ಯಾಯ ರಾಜಕಾರಣ ನೀಡುತ್ತದೆ ಎಂಬ ನಂಬಿಕೆ ಜನರಲ್ಲಿ ಉಳಿದಿಲ್ಲ. ಜನರೇ ಹೇಳುವಂತೆ ಈ ಭ್ರಷ್ಟ ಬಿಜೆಪಿ ಯನ್ನು ಪ್ರಶ್ನಿಸಿ ಬಯಲಿಗೆಳೆಯುವ ನೈತಿಕ ಶಕ್ತಿ ಎಎಪಿಗೆ ಮಾತ್ರ ಇದೆ” ಎಂದರು.

“ಇತ್ತೀಚೆಗೆ ಸಚಿವ ಸಿ.ಎನ್.ಅಶ್ವಥನಾರಾಯಣ ರ ಟೆಂಡರ್ ಹಗರಣದ ಬಗ್ಗೆ ಸಾಕ್ಷಿ ಸಮೇತ ಎಎಪಿ ಮಾತನಾಡಿದ್ದು, ಆದರೂ ಯಾವುದೇ ತನಿಖೆ ಆರಂಭವಾಗದ ಕಾರಣ, ಇಷ್ಟರಲ್ಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು’ ಎಂದು ರಾಜ್ಯ ವಕ್ತಾರ ಕೆ.ಮಥಾಯಿ ಹೇಳಿದರು

See also  ಕ್ರಿಸ್‌ಮಸ್, ಹೊಸ ವರ್ಷ ಆಚರಣೆಗೆ ಕೋವಿಡ್ ಪಾಲನೆ ಕಡ್ಡಾಯ

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಮತ್ತು ಪ್ರಚಾರ ಸಮಿತಿ ಸದಸ್ಯರಾದ ಲಕ್ಷ್ಮಿಕಾಂತ್ ರಾವ್, ಸುರೇಶ್ ರಾಥೋಡ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು