ಬೆಂಗಳೂರು: ವಿವಾದಿತ ಚಾಮರಾಜಪೇಟೆ ಆಟದ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಗುತ್ತೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ತಿರಂಗ ಹಾರಾಟ ಹೊರತಾಗಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ. ಈ ಸ್ವತ್ತು ಕಂದಾಯ ಇಲಾಖೆಯದ್ದು ಆಗಿರುವುದರಿಂದ ಕಂದಾಯ ಇಲಾಖೆ ವತಿಯಿಂದಲೇ ರಾಷ್ಟ್ರಧ್ವಜಾರೋಹಣ ಮಾಡಲಾಗುತ್ತೆ ಎಂದರು.
ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, ಚಾಮರಾಜಪೇಟೆ ಮೈದಾನದಲ್ಲಿ ಭಾರತ ಮಾತಾಕೀ ಜೈ, ವಂದೇ ಮಾತರಂ, ಸ್ವಾತಂತ್ರ್ಯ ಯೋಧರ ಹೆಸರು ಘೋಷಣೆ ಮಾತ್ರ ಕೂಗಬೇಕು. ಇದರ ಹೊರತಾಗಿ ಬೇರೆ ಏನನ್ನೂ ಘೋಷಣೆ ಹಾಕುವಂತಿಲ್ಲ ಎಂದು ಸೂಚಿಸಿದರು.
ಬೆಂಗಳೂರು ಉತ್ತರ ಎಸಿ ಅವರು ಧ್ವಜಾರೋಹಣ ಮಾಡ್ತಾರೆ. ಇದರಲ್ಲಿ ಕ್ಷೇತ್ರದ ಶಾಸಕರು, ಸಂಸದರು ಸೇರಿದಂತೆ ಸಾರ್ವಜನಿಕರು ಪಾಲ್ಗೊಳ್ಳಬಹುದು ಎಂದರು.