ಬೆಂಗಳೂರು: ಜಯನಗರದ 5 ನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ “ಉತ್ತರ ಆರಾಧನೆ” ಪ್ರಯುಕ್ತ ಪರಮ ಪೂಜ್ಯ 108 ಶ್ರೀ ಶ್ರೀ ಸುಬುಧೇದ್ರತೀರ್ಥ ಶ್ರೀಪಾದರ ಆದೇಶದಂತೆ ಆರ್. ಕೆ ವಾದಿಂದ್ರ ಆಚಾರ್ಯರ ಜಿ,ಕೆ ಆಚಾರ್ಯರ ನೇತೃತ್ವದಲ್ಲಿ ಅರ್ಚಕರಿಂದ ನಾನಾ ವಿಧ ಪುಷ್ಪಗಳಿಂದ ರಾಯರ ಬೃಂದಾವನಕ್ಕೆ ಅಲಂಕಾರ, ಮತ್ತು ಜಯನಗರದ ರಾಜ ಬೀದಿಗಳಲ್ಲಿ ಮಹಾರಥೋತ್ಸ ವವು ಸಿಡಿ ಮದ್ದು , ನಾನಾವಿಧ ವಾದ್ಯಗಳಿಂದ ವಿಶೇಷವಾಗಿ ನೆರವೇರಿತು.
ನಂತರ ರಾಯರ ಮುಂಭಾಗದ ಪ್ರಕಾರದಲ್ಲಿ ನಾನಾವಿದ ವಾದ್ಯ ಉತ್ಸವ ಶ್ರೀ ಹರಿ ಭಜನೆ ನರ್ತನ ದೊಂದಿಗೆ ವಿಶೇಷವಾಗಿ ಮಂಗಳಾರತಿ ನೆರವೇರಿತು.
ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಆ ಬಾಲ ವಯೋವೃದ್ಧದವರು ಸಹ ಭಾಗವಹಿಸಿ ದಾಸರ ಪದಗಳನ್ನು ಹೇಳುತ್ತಾ ಹೆಜ್ಜೆ ಹಾಕುತ್ತಾ ತಾಳ ತಟ್ಟುತ್ತಾ ಭಕ್ತಿ ಭಾವ ಪರವಶರಾಗಿ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಗುರುರಾಯರ ಅನುಗ್ರಹ ಪಡೆದು ನಂತರ ಶ್ರೀ ಗುರು ರಾಯರ ಮಹಾ ಪ್ರಸಾದ ರೂಪವಾಗಿ “ಅನ್ನ ಸಂತರ್ಪಣೆ”ಯ ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.
ಈ ದಿನ ಸಂಜೆ ಆರು ಮೂವತ್ತಕ್ಕೆ ಶ್ರೀಮತಿ ಸೀತಾ ಗುರುಪ್ರಸಾದ್ ಇವರ ನೇತೃತ್ವದಲ್ಲಿ ಭರತನಾಟ್ಯ ಕಾರ್ಯಕ್ರಮವು ನೆರವೇರಲಿದೆ ಎಂದು ಕಿಶೋರ್ ಆಚಾರ್ಯರು ತಿಳಿಸಿದರು.