News Kannada
Friday, September 29 2023
ಬೆಂಗಳೂರು ನಗರ

ಬೆಂಗಳೂರು: ರಾಜಭವನದಲ್ಲಿ 75 ಶ್ರೀಗಂಧ ಸಸಿ ನೆಟ್ಟು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

Bengaluru: 75 sandalwood saplings planted at Raj Bhavan to mark The Amrit Mahotsav of Independence
Photo Credit :

ಬೆಂಗಳೂರು, ಆ.17: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮ ಮತ್ತು ರಾಜಭವನದ ಸಹಯೋಗದಲ್ಲಿ ಬುಧವಾರ ರಾಜಭವನದ ಅಂಗಳದಲ್ಲಿ 75 ಶ್ರೀಗಂಧದ ಸಸಿಗಳನ್ನು ನೆಡಲಾಯಿತು.

ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಥಾವರ ಚಂದ್‌ ಗೆಹ್ಲೊಟ್‌ ಅವರು ಶ್ರೀಗಂಧ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾಅನುರಾಧ, ಕೆಎಸ್ ಏಫ್ ಡಿಸಿ ಅಧಿಕಾರಿಗಳು, ರಾಜಭವನದ ಅಧಿಕಾರಿಗಳು ಸಹ ಶ್ರೀಗಂಧ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಿದರು.

Bengaluru: 75 sandalwood saplings planted at Raj Bhavan to mark The Amrit Mahotsav of Independence

ನಂತರ ಮಾತನಾಡಿದ ಗೌರವಾನ್ವಿತ ರಾಜ್ಯಪಾಲರು ಶ್ರೀಗಂಧದ ನಾಡು ಎಂದೇ ಕರ್ನಾಟಕ ಪ್ರಸಿದ್ದಿಯಾಗಿದೆ. ಶ್ರೀಗಂಧದಂತಹ ಸೊಗಡನ್ನು ಹೊಂದಿರುವ ಸುಂದರ ನಾಡಿನ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ರಾಜ್ಯದಲ್ಲಿರುವ ಅರಣ್ಯವನ್ನು ಸಂರಕ್ಷಿಸುವುದರ ಜೊತೆಯಲ್ಲೇ, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನಗರ ಪ್ರದೇಶಗಳಲ್ಲೂ ಹೆಚ್ಚಾಗಿ ಗಿಡ ಮರಗಳನ್ನು ಬೆಳೆಸುವುದಕ್ಕೆ ಆದ್ಯತೆ ನೀಡಬೇಕು. ಇದರಿಂದ ನಗರಗಳಲ್ಲಿ ಹಸಿರು ಹೆಚ್ಚಾಗುವುದಲ್ಲದೆ, ಸೌಂದರ್ಯವೂ ಇಮ್ಮಡಿಯಾಗುತ್ತದೆ. 75 ಶ್ರೀಗಂಧದ ಮರಗಳನ್ನು ನೆಡುವ ಮೂಲಕ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ವವವನ್ನು ವಿಶೇಷವಾಗಿ ಆಚರಿಸುತ್ತಿರುವ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಕಾರ್ಯ ಶ್ಲಾಘನೀಯ. ಬೇರೆ ಸಂಘ ಸಂಸ್ಥೆಗಳೂ ಕೂಡಾ ಇಂತಹ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾಅನೂರಾಧ ಅವರು ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನ ಜನಮಾನಸದಲ್ಲಿ ಅಚ್ಚಳಿಯದಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹರ್‌ ಘರ್‌ ತಿರಂಗಾ ಯಶಸ್ವಿಯಾಗಿದೆ. ಈ ವಿಶೇಷ ಸಂಧರ್ಭವನ್ನು ಇನ್ನಷ್ಟು ವಿಶೇಷವಾಗಿ ಆಚರಿಸುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ರಾಜಭವನದಲ್ಲಿ 75 ಶ್ರೀಗಂಧದ ಸಸಿಗಳನ್ನು ಘನತೆವೆತ್ತ ರಾಜ್ಯಪಾಲರಾದ ಥಾವರ್‌ ಚಂದ ಗೆಹ್ಲೊಟ್‌ ಅವರ ಅಮೃತ ಹಸ್ತದಿಂದ ನೆಡೆಸಲಾಗಿದೆ. ಅಲ್ಲದೇ, ಶ್ರೀಗಂಧದ ಮರಗಳಿಗೆ ಸೂಕ್ತ ರಕ್ಷಣೆ ದೊರಕುವಂತಹ ಕಚೇರಿಗಳಲ್ಲೂ ಕೂಡಾ ಸಸಿಗಳನ್ನು ನೆಡುವ ಕಾರ್ಯವನ್ನು ನಮ್ಮ ನಿಗಮದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ರಾಧಾದೇವಿ, ಐ.ಎಫ್‌,ಎಸ್‌, ರಾಜಭವನದ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್, ಎಡಿಸಿ ಸಾಬೂ ಥಾಮಸ್, ರಾಜ್ಯಪಾಲರ ಉಪ ಕಾರ್ಯದರ್ಶಿ ಯೋಗೇಶ್ ಉಪಾಧ್ಯಾಯ್, ಓಎಸ್ ಡಿ ಶಂಕರ್ ಗುಜರ್ ಸೇರಿದಂತೆ ಮುಂತಾದ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

See also  ನಮ್ಮ ಕೆಲಸ ಏನಿದೆಯೋ ಅದನ್ನು ನಾವು ಮಾಡುತ್ತಿದ್ದೇವೆ; ಪೊಲೀಸ್ ಆಯುಕ್ತ ಕಮಲ್ ಪಂತ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು