ಬೆಂಗಳೂರು: ನಂಬರ್ ಒನ್ ಸ್ಥಾನದಲ್ಲಿದ್ದ ಕರ್ನಾಟಕವನ್ನು ಹದಗೆಡಿಸುತಿದ್ದು, ಯುಪಿ ಮಾಡೆಲ್ ಮಾಡುತ್ತೇವೆ ಎನ್ನುತ್ತಾ ರಾಜ್ಯವನ್ನ ಕೊನೆಯ ಸ್ಥಾನಕ್ಕೆ ಕೊಂಡೊಯ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರ ಸರ್ಕಾರ ಕೊಟ್ಡ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಕೇಂದ್ರ ಸರ್ಕಾರ ಬೆಲೆ ನಿಯಂತ್ರಣ ಮಾಡುತ್ತಿಲ್ಲ. ಮಂಡಕ್ಕಿ ಮೇಲೂ ಜಿಎಸ್ ಟಿ ಹಾಕಿದ್ದಾರೆ. ಚಿತಾಗಾರದ ಮೇಲೂ ಜಿಎಸ್ ಟಿ ವಿಧಿಸಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ರಂಭಾಪುರಿ ಶ್ರೀ ಭೇಟಿ ಅವರ ವೈಯುಕ್ತಿಕ ವಿಚಾರ. ನಾನು ಅದರ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.