ಬೆಂಗಳೂರು: ಫಾರ್ಚುನ್ ಕಂಪೆನಿಯಲ್ಲಿ ಉದ್ಯೋಗ ಮಾಡಲು ವಿಶೇಷಚೇತನ ಇಂಜಿನಿಯರಿಂಗ್ ಅಭ್ಯರ್ಥಿಗಳ ನೇಮಕ ಇಂಜಿನಿಯರ್ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶೇಷಚೇತನ ಇಂಜಿನಿಯರಿಂಗ್ ಅಭ್ಯರ್ಥಿಗಳ ನೇಮಕ ಇಂಜಿನಿಯರಿಂಗ್ ಅಭ್ಯರ್ಥಿಗಳಾದ, ಎಲೆಕ್ಟ್ರಾನಿಕ್ಸ್, ವಿದ್ಯುತ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಮತ್ತು ಮಾಹಿತಿ ತಂತ್ರಜ್ಞಾನ ಸ್ಟೀಮ್ 2021-22 ನೇ ಬ್ಯಾಚ್‍ನ ಆಸಕ್ತ ವಿಕಲಾಂಗ ಅಭ್ಯರ್ಥಿಗಳು (ಮುಖ್ಯವಾಗಿ ಕೈ ಕಾಲುಗಳು) ಎಂ.ಎನ್.ಸಿ ಜೊತೆಗೆ ಬೆಂಗಳೂರಿನಲ್ಲಿ ಇಂಟರ್ನ್, ಉದ್ಯೋಗ ಅವಕಾಶಗಳನ್ನು ನೀಡಲಾಗುವುದು.
ಫಾರ್ಚುನ್ 200 ಕಂಪನಿಗಳಲ್ಲಿ ಉದ್ಯೋಗ ಮಾಡಲು ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು . ತಮ್ಮ ವೈಯುಕ್ತಿಕ ವಿವರ (ರೆಸ್ಯೂಮ್) ಗಳನ್ನು ಸೆಪ್ಟೆಂಬರ್ 03 ರೊಳಗಾಗಿ ಇ-ಮೇಲ್ [email protected] ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಶಾಖಾ ಉಸ್ತುವಾರಿ ಜರ್ರಿ ಆಂಟೊನಿ, ಮೊಬೈಲ್ ಸಂಖ್ಯೆ 7904635504 ನ್ನು ಸಂಪರ್ಕಿಸಬಹುದಾಗಿದೆ.