ಬೆಂಗಳೂರು: ಮಳೆ ಅವಾಂತರದಿಂದಾಗಿ ಬೆಂಗಳೂರಿನಲ್ಲಿ ಜನರು ಬೋಟ್ ನಲ್ಲಿ ಹೋಗುವ ಪರಿಸ್ಥಿತಿ. ಇಂತಹ ಸ್ಥಿತಿ ಈವರೆಗೆ ಬೆಂಗಳೂರಿನಲ್ಲಿ ಬಂದಿರಲಿಲ್ಲ. ಒತ್ತುವರಿ ತೆರವಿಗೆ ಸರ್ಕಾರ ಮುಂದಾಗದಿರುವುದೇ ಇದಕ್ಕೆಲ್ಲ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬೆಂಗಳೂರಿನ ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದೆ. ರಸ್ತೆಗಳಲ್ಲಿ ಬೋಟ್ ನಲ್ಲಿ ಹೋಗಬೇಕಾದ ಪರಿಸ್ಥಿತಿ. ಇತಿಹಾಸದಲ್ಲಿಯೇ ಇಂತಹ ಸಂದರ್ಭ ಬೆಂಗಳೂರಿಗೆ ಬಂದಿರಲಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ನನ್ನ ಸ್ವಂತ ಬೋಟ್ ನಲ್ಲಿ ಹೋಗಿರಲಿಲ್ಲ. ಎನ್ ಡಿ ಆರ್ ಎಫ್ ತಂಡದ ಬೋಟ್ ನಲ್ಲಿ ಹೋಗಿದ್ದೆ. ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ರಸ್ತೆಯಲ್ಲಿಯೇ ಎನ್ ಡಿ ಆರ್ ಎಫ್ ತಂಡದವರೇ ಬೋಟ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದರು.