News Kannada
Saturday, December 03 2022

ಬೆಂಗಳೂರು ನಗರ

ಬೆಂಗಳೂರು: ದಸರಾ ಸಂಭ್ರಮಕ್ಕಾಗಿ ಸತ್ಯಗಣಪತಿ ದೇವಸ್ಥಾನದಿಂದ ಪೂಜಾ ಸಾಮಗ್ರಿ ವಿತರಣೆ

Photo Credit : By Author

ಬೆಂಗಳೂರು: ಆಯುಧ ಪೂಜೆಯನ್ನು ವಿಶೇಷವಾಗಿ ಜನರು ಆಚರಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜೆ.ಪಿ ನಗರದ ಪುಟ್ಟೇನಹಳ್ಳಿಯ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ ವತಿಯಿಂದ ಇಂದು 5 ಸಾವಿರ ಬೂದುಕುಂಬಳಕಾಯಿಗಳನ್ನ 10 ನಾಣ್ಯಗಳ ಸಮೇತ ಪೂಜಾ ಸಾಮಗ್ರಿಗಳನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ಉಚಿತವಾಗಿ ವಿತರಿಸಲಾಯಿತು.

ದಸರಾ ರಾಜ್ಯದ ನಾಡಹಬ್ಬ. ಆಯುಧ ಪೂಜೆಯಂದು ನಮ್ಮ ದೇವಸ್ಥಾನದ ಸುತ್ತ ಮತ್ತಲಿನ ಎಲ್ಲಾ ಮನೆಗಳಲ್ಲಿ ವಿಜ್ರಂಭಣೆಯಿಂದ ಆಯುಧ ಪೂಜೆಯನ್ನು ನೆರವೇರಿಸಲಿ ಎನ್ನುವ ಉದ್ದೇಶಧಿಂದ ನಮ್ಮ ದೇವಸ್ಥಾನದ ವತಿಯಿಂದ 5 ಸಾವಿರ ಜನರಿಗೆ ಹರಿಶಿಣ, ಕುಂಕುಮ, 2 ನಿಂಬೇ ಹಣ್ಣು, ಊದುಕಡ್ಡಿ, ಕರ್ಪೂರ, 10 ಕಾಯಿನ್‌ ಹೊಂದಿರುವ ಪೂಜಾ ಸಾಮಗ್ರಿಗಳನ್ನು ವಿತರಿಸಿದ್ದೇವೆ.

ಹಬ್ಬಗಳನ್ನು ವಿಶೇಷವಾಗಿ ಆಚರಿಸಲು ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸತ್ಯಗಣಪತಿ ದೇವಸ್ಥಾನ ಹಲವಾರು ವಿನೂತನ ಆಚರಣೆಗಳನ್ನ ಅಳವಡಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತದೆ.

See also  ನವದೆಹಲಿ: ಇಂದು ಭಾರತದ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ದ್ರೌಪದಿ ಮುರ್ಮು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು