News Kannada
Thursday, December 08 2022

ಬೆಂಗಳೂರು ನಗರ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಬಿ-ಪ್ಯಾಕ್ ವತಿಯಿಂದ ಸಿಹಿ ತಿನಿಸು ವಿತರಣೆ

Photo Credit : G Mohan
ಬೆಂಗಳೂರು : ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಡುವ ನಿಟ್ಟಿನಲ್ಲಿ‌ ಶ್ರಮವಹಿಸಿ ಕಾರ್ಯನಿರ್ವಹಿಸುವ ಸ್ವಚ್ಛತಾ ಯೋಧರಾದ ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ  ಬಿ-ಪ್ಯಾಕ್ ಸಂಸ್ಥೆಯು ಸಿಹಿ ವಿತರಿಸುತ್ತಿದ್ದಾರೆ.
ಅದರ ಭಾಗವಾಗಿ ಈ ವರ್ಷವೂ ನಗರದಲ್ಲಿರುವ ಪೌರಕಾರ್ಮಿಕರು, ಆಟೋ-ಟಿಪ್ಪರ್, ಕಾಂಪ್ಯಾಕ್ಟರ್ ಗಳ ಚಾಲಕ-ಸಿಬ್ಬಂದಿ ಹಾಗೂ ಘನತ್ಯಾಜ್ಯ ನಿರ್ವಹಣೆಯ ಸಿಬ್ಬಂದಿಗಳು ಸೇರಿದಂತೆ ಸುಮಾರು 28,000 ಪೌರಕಾರ್ಮಿಕರ ಸಿಬ್ಬಂದಿಗೆ ದೀಪಾವಳಿ ಹಬ್ಬದ ಅಂಗವಾಗಿ ಸಿಹಿ ತಿನಿಸು ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ.
ಅದರಂತೆ, ಬಿ-ಪ್ಯಾಕ್ ಸಂಸ್ಥೆಯ ವತಿಯಿಂದ ಸಿಹಿ ತಿನಿಸು ವಿತರಣೆಯನ್ನು 243 ವಾರ್ಡಿನ ಪೌರಕಾರ್ಮಿಕರಿಗೆ ಹಂಚಿಕೆ ಮಾಡುವ ಕಾರ್ಯಕ್ರಮದ ಭಾಗವಾಗಿ  ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ಪಾಲಿಕೆಯ ಕೇಂದ್ರ ಕಛೇರಿ ಆವರಣದ ಕೌನ್ಸಿಲ್ ಕಟ್ಟಡದ ಮುಂಭಾಗದಲ್ಲಿ ಸಾಂಕೇತಿಕವಾಗಿ ಸಂಪಂಗಿರಾಮನಗರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸಿಹಿ ತಿನಿಸು ವಿತರಿಸಿದರು.
ಈ ವೇಳೆ ಬಿ.ಕ್ಲಿಪ್ ಕಾರ್ಯಕ್ರಮ ಮುಖ್ಯಸ್ಥರಾದ ರಾಘವೇಂದ್ರ ಹೆಚ್ ಎಸ್, ಸಂಪಂಗಿರಾಮನಗರ ಬಿ.ಕ್ಲಿಪ್ ನಾಯಕರಾದ ಪ್ರೇಮ್ ಕುಮಾರ್, ವಿನೋದ್ ಸಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
See also  ರಾಜಸ್ಥಾನ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

31125

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು