ಬೆಂಗಳೂರು: ಎಂಸಿಎ ಕನ್ಸಲ್ಟೆನ್ಸಿ ತನ್ನ ಹೊಸ ಕಚೇರಿಯನ್ನು ಇದೇ ಬರುವ ಅಕ್ಟೋಬರ್ 19ರಂದು ಆರಂಭಿಸುತ್ತಿದೆ. ಬೆಂಗಳೂರಿನ ಜಯನಗರದ ಎರಡನೇ ಹಂತದಲ್ಲಿರುವ ಟ್ರಿಡೆಂಟ್ ಟವರ್ ನಲ್ಲಿ ಬೆಳಿಗ್ಗೆ 11ಕ್ಕೆ ಉದ್ಘಾಟನೆ ನಡೆಯಲಿದೆ. ಮಾಜಿ ಸಂಸದ ಹಾಗೂ ಕೇಂದ್ರ ರೈಲ್ವೇ ಸಚಿವ ಶ್ರೀ ಸುರೇಶ್ ಪ್ರಭು ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಎಂಸಿಎ ಕನ್ಸಲ್ಟಿಂಗ್ ಮಧ್ಯಮದಿಂದ ಬೃಹತ್ ಗಾತ್ರದ ಕಂಪೆನಿಗಳೊಂದಿಗೆ ಕೆಲಸ ಮಾಡುತ್ತದೆ. ಇದು ಸಂಸ್ಥೆಗಳ ಬೆಳವಣಿಗೆ ಮತ್ತು ಆಡಳಿತಕ್ಕೆ ಹಲವು ರೀತಿಯಲ್ಲಿ ನೆರವು ನೀಡುತ್ತದೆ. ಕಂಪೆನಿಯ ಅಭಿವೃದ್ಧಿಗಾಗಿ ಕಾರ್ಯತಂತ್ರವನ್ನು ರೂಪಿಸುವುದು, ಅನುಷ್ಠಾನಗೊಳಿಸುವುದು, ಹೂಡಿಕೆದಾರರನ್ನು ಆಕರ್ಷಿಸಲು ವ್ಯಾಪಾರ ಯೋಜನೆ ಮತ್ತು ಮೌಲ್ಯಮಾಪನವನ್ನು ಹೆಚ್ಚಿಸುವುದು, ವ್ಯಾಪಾರಕ್ಕಾಗಿ ಸಲಹೆ ನೀಡುವುದು, ಸಮರ್ಥ ಕಾರ್ಯಾಚರಣೆಗಳ ಮೂಲಕ ಹಣಕಾಸಿನ ಗುರಿಗಳನ್ನು ಪೂರೈಸಲು ಸಹಾಯ ಮಾಡುವುದು, ಜಾಗತಿಕ ವ್ಯಾಪಾರ ಸೇವಾ ಕೇಂದ್ರವನ್ನು ಸ್ಥಾಪಿಸುವುದರ ಮೂಲಕ ಕಾರ್ಯಾಚರಣೆಗಳನ್ನು ಉತ್ತಮಗೊಳಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ.
ಕಂಪೆನಿಯು ಮೂರು ದಶಕಗಳ ಸೇವಾ ಇತಿಹಾಸವನ್ನು ಹೊಂದಿದ್ದು, ಭಾರತದಾದ್ಯಂತ 15 ಪ್ರಮುಖ ನಗರಗಳಲ್ಲಿ ನೆಟ್ ವರ್ಕ್ ಸಲಹಾ ಸಂಸ್ಥೆಗಳನ್ನು ನಿರ್ಮಿಸಲು ಅಪಾರ ಅನುಭವ ಹೊಂದಿರುವ ವೃತ್ತಿಪರ ಅಕೌಂಟೆಂಟ್ ಗಳು ತಂಡದಲ್ಲಿದ್ದಾರೆ. ಹಣಕಾಸು ವಂಚನೆ ಮತ್ತು ಕಾರ್ಪೋರೇಟ್ ಪುನರ್ ರಚನೆ ಬಗ್ಗೆ ಸಲಹೆ ನೀಡಲು ವಿಶ್ವಾಸಾರ್ಹ ಸಲಹೆಗಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸಂಸ್ಥೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆಗೆ ಮುಂಬೈ, ಚೆನ್ನೈ ಮತ್ತು ಹೈದರಾಬಾದ್ ಗಳಲ್ಲಿ ಕಚೇರಿಗಳಿವೆ.
ಸ್ಥಳ: ಟ್ರಿಡೆಂಟ್ ಟವರ್, ಜಯನಗರ
ದಿನಾಂಕ-ಅಕ್ಟೋಬರ್ 19, ಬುಧವಾರ
ಸಮಯ-ಬೆಳಿಗ್ಗೆ 11