News Kannada
Wednesday, November 30 2022

ಬೆಂಗಳೂರು ನಗರ

ಬೆಂಗಳೂರು: ಮಹಿಳಾ ಕಾಫಿ ಸಂಘಟನೆಯಿಂದ ಬೆಂಗಳೂರಿನಲ್ಲಿ ಎರಡು ದಿನಗಳ ಕಾಫಿ ಸಂತೆ! - 1 min read

Photo Credit : By Author

ಬೆಂಗಳೂರು: ಮಹಿಳೆಯರ ಕಾಫಿ ಅಲೈಯನ್ಸ್, ಇಂಡಿಯಾ ಚಾಪ್ಟರ್ (Women Coffee Alliance India Chapter) ತನ್ನ ಎರಡು ದಿನಗಳ ಕಾಫಿ ಸಂತೆಯ ಆರನೇ ವರ್ಷದ ಆಚರಣೆಯನ್ನು ಮುಂದಿನ ಅ.29ರಿಂದ ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಕಾಫಿ ಬೀಜಗಳು, ಹೊಸ ಕಾಫಿ ಉತ್ಪನ್ನಗಳು ಮತ್ತು ಸಂಬಂಧಿತ ಆಹಾರಗಳ ಬಿಡುಗಡೆ, ಕಾಫಿ ಉಪಕರಣಗಳ ಪ್ರದರ್ಶನಗಳು ಮತ್ತು ಸಾಮಗ್ರಿಗಳು, ಕಾಫಿ ಸಂಬಂಧಿತ ಮಾಹಿತಿ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಡಬ್ಲ್ಯುಸಿಎಐ ಅಧ್ಯಕ್ಷೆ ಸುನಾಲಿನಿ ಮೆನನ್ ತಿಳಿಸಿದರು.

ಈ ಮೇಳದಲ್ಲಿ ಪ್ರಮುಖ ಕಾಫಿ ಉತ್ಪಾದಿಸುವ ಮತ್ತು ಸೇವಿಸುವ ದೇಶಗಳನ್ನು ಪ್ರತಿನಿಧಿಸುವ ಗಣ್ಯರು ಮತ್ತು ಭಾರತದ ಅನೇಕ ಕಾಫಿ ಕೆಫೆ ಸರಪಳಿಗಳು ಮತ್ತು ಸಣ್ಣ ಮಹಿಳಾ ಚಿಲ್ಲರೆ ವ್ಯಾಪಾರಿಗಳಿಗೆ ‘ವುಮನ್ ಕಾಫಿ ಬ್ರೂಯಿಂಗ್ ಸ್ಟಾರ್’ (women Coffee brewing star) ಎಂಬ ಪ್ರಶಸ್ತಿಯನ್ನೂ ಆಯೋಜಿಸಲಾಗಿದೆ.

ಪ್ರಮುಖ ಕಾಫಿ ಕಂಪನಿಗಳು ತಮ್ಮ ಉತ್ಪನ್ನಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸುವ ಜತೆಗೇ ಮತ್ತು ಲೈವ್ ನೃತ್ಯ ಮತ್ತು ಸಂಗೀತವು ವೀಕ್ಷಕರ ಮನರಂಜಿಸಲಿದೆ, ಜನವರಿ 2019 ರಲ್ಲಿ ನಡೆಸಿದ ಕೊನೆಯ ಕಾಫಿ ಸಂತೆ ಕಾರ್ಯಕ್ರಮದಲ್ಲಿ ಸುಮಾರು 3000 ಕ್ಕೂ ಹೆಚ್ಚು ಕಾಫಿ ಪ್ರಿಯರು ಭಾಗವಹಿಸಿದ್ದರು ಎಂದು ಮೆನನ್ ಹೇಳಿದರು.

2014 ರಿಂದ ವಾರ್ಷಿಕವಾಗಿ ಆಯೋಜಿಸಲಾಗುತ್ತಿರುವ ಈ ಮೇಳವು ಭಾರತದಲ್ಲಿನ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಏಳಿಗೆಗಾಗಿ ನಡೆಯುತ್ತಿರುವ ಯೋಜನೆಗಳನ್ನು ಬೆಂಬಲಿಸಲು ಸಂಘಟನೆಯ ವಾರ್ಷಿಕ ನಿಧಿಸಂಗ್ರಹಣೆ ಕಾರ್ಯಕ್ರಮವಾಗಿದೆ ಎಂದು ಅವರು ತಿಳಿಸಿದ್ದಾರೆ.

“ಈ ಯೋಜನೆಗಳು ಮಹಿಳಾ ಕಾಫಿ ತೋಟದ ಕಾರ್ಮಿಕರು ಮತ್ತು ಅವರ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಲು ಮತ್ತು ಅವರ ಮಾನಸಿಕ ಮತ್ತು ದೈಹಿಕ ಅಗತ್ಯಗಳಿಗಾಗಿ ಹಿರಿಯ ಆರೈಕೆ ಬೆಂಬಲವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಈ ಕಾರ್ಯಕ್ರಮದ ಮೂಲಕ, ಡಬ್ಲ್ಯುಸಿಎಐ ಬಡ ಮಹಿಳಾ ಕಾಫಿ ತೋಟದ ಕಾರ್ಮಿಕರು ಮತ್ತು ಅವರ ಹೆಣ್ಣು ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಬೆಂಬಲಿಸುವ ಅಗತ್ಯತೆಯ ಅರಿವನ್ನು ಮೂಡಿಸುತ್ತದೆ, ಇದು ಅವರಲ್ಲಿ ಹೊಸ ಭರವಸೆಯನ್ನು ಸೃಷ್ಟಿಸುವುದಲ್ಲದೆ , ಬದುಕನ್ನು ಉನ್ನತೀಕರಿಸಲು ಸಹಕಾರಿ ಆಗುತ್ತದೆ ಎಂದು ಅವರು ಹೇಳಿದರು.

ವುಮೆನ್ ಸ್ಟಾರ್ಸ್ ಬ್ರೂವರ್ ಸ್ಕಿಲ್ಸ್ ಚಾಂಪಿಯನ್ಶಿಪ್ನಲ್ಲಿ, ಮಹಿಳಾ ಸ್ಪರ್ಧಿಗಳು ವಿವಿಧ ಹೋಮ್ ಬ್ರೂಯಿಂಗ್ ಉಪಕರಣಗಳಲ್ಲಿ ಸುವಾಸನಾಭರಿತ ಕಾಫಿಯನ್ನು ತಯಾರಿಸುವಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ.

ಈ ವರ್ಷ, ಚಾಂಪಿಯನ್ಶಿಪ್ ಸ್ಪರ್ಧೆಯು ಹೋಮ್ ಬ್ರೂಯಿಂಗ್ ಸಲಕರಣೆಗಳ ಮೇಲೆ ನಡೆಯುತ್ತಿದ್ದು ಫೈನಲ್ಸ್ ಅಕ್ಟೋಬರ್ 29 ರಂದು ನಡೆಯಲಿದೆ ಎಂದು ಅವರು ಹೇಳಿದರು.

ಕಾಪಿ ನಕ್ಷತ್ರ ಸ್ಪರ್ಧೆಯಲ್ಲಿ, ಸ್ಥಳೀಯ ಮತ್ತು ಅಂತರಾಷ್ಟ್ರೀಯ ತೀರ್ಪುಗಾರರು “ಸಾಂಪ್ರದಾಯಿಕ ಭಾರತೀಯ ಫಿಲ್ಟರ್ ಕಾಫಿ”, “ಕ್ಯಾಪುಸಿನೊ” ಮತ್ತು “ಸಿಗ್ನೇಚರ್ ಬೆವರೇಜ್ – ಹಾಟ್/ಕೋಲ್ಡ್” ಎಂಬ ಮೂರು ವಿಭಾಗಗಳಲ್ಲಿ ಪ್ರತಿಯೊಂದರಲ್ಲೂ “ಟೇಸ್ಟಿ” ಕಾಫಿಯನ್ನು ಆಯ್ಕೆ ಮಾಡುತ್ತಾರೆ. ಕಾಫಿ ಕೆಫೆಗಳಿಗಾಗಿ ಆಯೋಜಿಸಿರುವ ಈ ಸ್ಪರ್ದೆಯ ಫೈನಲ್ ಅಕ್ಟೋಬರ್ 30 ರಂದು ನಡೆಯಲಿದೆ. ಕಾಫಿ ಸಂತೆಯಲ್ಲಿ ಅಕ್ಟೋಬರ್ 30 ರಂದು “ವಿಮೆನ್ ಸ್ಟಾರ್ಸ್ ಬ್ರೂವರ್ ಸ್ಕಿಲ್ಸ್ ಚಾಂಪಿಯನ್ಶಿಪ್” (women stars brewer skills championship) ಮತ್ತು “ಕಾಪಿ ನಕ್ಷತ್ರ” ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲು “ಚೀರ್ಸ್ ಟು ಕಾಫಿ” ಸಮಾರಂಭವನ್ನು ಆಯೋಜಿಸಲಾಗಿದೆ ಅವರು ತಿಳಿಸಿದ್ದಾರೆ.

See also  ಗೋಕರ್ಣ: ವಿಷ್ಣುಗುಪ್ತ ವಿವಿಯಲ್ಲಿ ಅಹಿಚ್ಛತ್ರ ಕ್ಯಾಂಪಸ್ ಶೀಘ್ರದಲ್ಲಿ ಆರಂಭ- ರಾಘವೇಶ್ವರ ಶ್ರೀ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1620
Coovercolly Indresh

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು