News Kannada
Monday, February 06 2023

ಬೆಂಗಳೂರು ನಗರ

ಬೆಂಗಳೂರು: ತೊಗಲು ಬೊಂಬೆ ಕಲೆ ಉಳಿಸುವುದು ಅಗತ್ಯ

Bengaluru: It is necessary to save the art of puppetry
Photo Credit : By Author

ಬೆಂಗಳೂರು: ನಶಿಸುತ್ತಿರುವ ತೊಗಲು ಬೊಂಬೆಯಾಟವನ್ನು ರಕ್ಷಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದ್ದು, ಈ ಕಾರ್ಯಕ್ಕೆ ಯುವ ಸಮೂಹವನ್ನು ಸೆಳೆಯಬೇಕು ಎಂದು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಎನ್.ಆರ್. ಕಾಲೋನಿಯ ಡಾ. ಸಿ. ಅಶ್ವತ್ಥ ಕಲಾ ಭವನದಲ್ಲಿ ರಾಜ್ಯದ ಏಕೈಕ ಮಹಿಳಾ ತಂಡ ರಂಗಪುತ್ಥಳ ಯಶೋಧ ಪಪೆಟ್ರಿ ಸಂಸ್ಥೆ ಆಯೋಜಿಸಿದ್ದ ಗೊಂಬೆಯಾಟ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತೊಗಲು ಗೊಂಬೆಯಾಟ ಕಲೆಯನ್ನು ಪೋಷಿಸಲು ಈ ಸಂಸ್ಥೆ ಮಹಿಳಾ ತಂಡ ಪೌರಾಣಿಕ ಕಥೆಗಳನ್ನು ನವೀನ ಕಲ್ಪನೆಗಳೊಂದಿಗೆ ಯುವ ಜನತೆಗೆ ಪರಿಚಯಿಸುವ ಪ್ರಯತ್ನದಲ್ಲಿ ಈ ತಂಡ ನಿತರವಾಗಿದೆ. ಪಾರಂಪರಿಕ ಗ್ರಾಮೀಣ ಕಲೆಯಾದ ತೊಗಲು ಗೊಂಬೆಯಾಟವನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನೂರಾರು ಯಶಸ್ವಿ ಪ್ರದರ್ಶನಗಳನ್ನು ನೀಡಿದೆ ಎಂದು ಹೇಳಿದರು.

ರಂಗಪುತ್ಥಳಿ ಯಶೋದ ಪಪೆಟ್ರಿ ಸಂಸ್ಥೆಯ 13ನೇ ವರ್ಷಾಚರಣೆ ಅಂಗವಾಗಿ ತೊಗಲು ಬೊಂಬೆಯಾಟ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಡಾ. ರಾಧಾಕೃಷ್ಣ ಉರಾಳ ಅವರಿಂದ ಯಕ್ಷಗಾನ ಪ್ರಸ್ತುತಪಡಿಸಲಾಯಿತು. ಹಾಸ್ಯ ಬರಹಗಾರ ನರಸಿಂಹಮೂರ್ತಿ, ಗೊಂಬೆಯಾಟ ಕಲಾವಿದ ಆರ ಕಟ್ಟಿ ಭಾಗವಹಿಸಿದ್ದಾರೆ. ಹಿರಿಯ ಚಿತ್ರನಟ ಶರಣ್, ಸಂಸ್ಥೆಯ ಮುಖ್ಯಸ್ಥರಾದ ಯಶೋಧ ಶಶಿಧರ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

See also  ಕಾರವಾರ: ಪೊಲೀಸ್ ಅಧಿಕಾರಿ ಸೇರಿದಂತೆ ಮೂವರ ವಿರುದ್ದ ಮಾನನಷ್ಟ ಮೊಕ್ಕದ್ದಮೆ- ರಾಘು ನಾಯ್ಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು