ಬೆಂಗಳೂರು, ಡಿ.22: “ಎಲ್ಲರಿಗೂ ಶಿಕ್ಷಣ” (Education to All) ಎನ್ನುವ ಧ್ಯೇಯೋದ್ದೇಶದ ಅಡಿಯಲ್ಲಿ 1971 ರಲ್ಲಿ ಪ್ರಾರಂಭವಾದ “ಆದರ್ಶ ಸಮೂಹ ಸಂಸ್ಥೆ” ತನ್ನ ಸ್ವರ್ಣಮಹೋತ್ಸವವನ್ನು ಆಚರಿಸುತ್ತಿದ್ದು, ಡಿಸೆಂಬರ್ 25 ರಂದು ನಗರದ ಅರಮನೆ ಮೈದಾನದಲ್ಲಿ “ಆದರ್ಶ ಸ್ವರ್ಣಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆದರ್ಶ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಜಿತೇಂದ್ರ ಮರಾಡಿಯ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಎಲ್ಲರಿಗೂ ಶಿಕ್ಷಣ ಎನ್ನುವ ಪ್ರಮುಖ ಉದ್ದೇಶದ ಮೇಲೆ ಪ್ರಾರಂಭಿಸಲಾದ ಆದರ್ಶ ಶೈಕ್ಷಣಿಕ ಸಂಸ್ಥೆ ಕಳೆದ 50 ವರ್ಷಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಿದೆ. ದಿವಂಗತ ಶ್ರಿ ವಿ ಪ್ರೇಮರಾಜ್ ಜಿ ಜೈನ್ ಅವರಿಂದ ಪ್ರಾರಂಭಿಸಲಾದ ಈ ಶೈಕ್ಷಣಿಕ ಸಂಸ್ಥೆಗಳು ಪ್ರಸ್ತುತ ಶ್ರೀ. ಪದಮ್ ರಾಜ್ ಮೆಹ್ತಾ ಅವರ ಅಧ್ಯಕ್ಷತೆಯ ಸಮಿತಿಯ ನೇತೃತ್ವದಲ್ಲಿ ಉತ್ತಮ ಸೇವೆಗಳನ್ನು ಒದಗಿಸುತ್ತಿದೆ.
ವಿಶೇಷ ಚೇತನರಿಗೂ ಸಮಾನ ಅವಕಾಶ: ವಿಶೇಷ ಚೇತನ ಮಕ್ಕಳಿಗೂ ಸಾಮಾನ್ಯ ಮಕ್ಕಳ ಜೊತೆಯಲ್ಲಿಯೇ ಬೆರೆಯುವ ಅವಕಾಶ ನೀಡಬೇಕು ಹಾಗೂ ಅವರು ಸಾಮಾನ್ಯ ಮಕ್ಕಳಂತೆಯೇ ಕಲಿಯಲು ಅವಕಾಶ ನೀಡಬೇಕು ಎಂದು ಕಳೆದ 13 ವರ್ಷಗಳ ಹಿಂದೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇಂದು ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ 90 ಕ್ಕೂ ಹೆಚ್ಚು ದಿವ್ಯಾಂಗರು (ಕಿವಿ ಕೇಳದ ಮಾತು ಬಾರದ) ವಿದ್ಯಾರ್ಥಿಗಳ ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಅಗತ್ಯವಿರುವ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಇಂತಹ ಮಹತ್ವದ ಉದ್ದೇಶ ಹೊಂದಿರುವ ರಾಜ್ಯದ ಏಕೈಕ ಕಾಲೇಜು ನಮ್ಮದು ಎನ್ನುವ ಸಂತಸ ನಮ್ಮದಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಪದಮ್ ರಾಜ್ ಮೆಹ್ತಾ ಅವರು ಮಾತನಾಡಿ, “ಆದರ್ಶ ಸ್ವರ್ಣಮಹೋತ್ಸವ” ಕಾರ್ಯಕ್ರಮ ವನ್ನು ಡಿಸೆಂಬರ್ 25 ರಂದು ನಗರದ ಅರಮನೆ ಮೈದಾನ ಚಾಮರ ವಜ್ರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಮಾನ್ಯ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯಸಭೆಯ ಸದಸ್ಯರಾದ ಶ್ರೀ ಲಹರ್ ಸಿಂಗ್ ಸಿರೋಯ , ಲೋಕಸಭೆಯ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ ಹಲವಾರು ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಮ್ಮ ಸಂಸ್ಥೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ದವಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಅಗತ್ಯವಿರುವ ಎಲ್ಲಾ ಹೊಸ ಅಂಶಗಳನ್ನು ಅಳವಡಿಸಿಕೊಳ್ಳುತ್ತಿದೆ. ಕುಂಬಳಗೊಡಿನಲ್ಲಿ 32 ಏಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕ್ಯಾಂಪಸ್ನಲ್ಲಿ ಸ್ಟೇಟ್ ಆಪ್ ದ ಆರ್ಟ್ ಸ್ಪೋರ್ಟ್ಸ ಕಾಂಪ್ಲೆಕ್ಸ್ ಅಳವಡಿಸಲಾಗುತ್ತಿದೆ. ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಸಂಸ್ಥೆಯ ಪೋಷಣೆ ಮಾಡುತ್ತಿರುವ ದಾನಿಗಳು, ಸಮಿತಿಯ ಸದಸ್ಯರು, ವಿದ್ಯಾರ್ಥಿಗಳು, ಸಿಬ್ಬಂದಿಗಳು, ಪೋಷಕರಿಂದ. ಇನ್ನು ಹೆಚ್ಚಿನದನ್ನು ಸಾಧಿಸುವ ಗುರಿಯನ್ನು ನಾವೆಲ್ಲರೂ ಹೊಂದಿದ್ದೆವೆ ಎಂದು ಹೇಳಿದರು.