ಬೆಂಗಳೂರು: ಭಾರತದ ಭೌತಿಕ ಬೆಳವಣಿಗೆಯ ಹಿಂದೆ ಲಂಬಾಣಿ ಸಮುದಾಯದ ಶ್ರಮವಿದೆ. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇತ್ತೀಚೆಗೆ ಬುಡಕಟ್ಟು ಸಮಾಜದ ಅಭಿವೃದ್ಧಿಗಾಗಿ ನೂತನ ಯೋಜನೆಗಳನ್ನು ರೂಪಿಸಿವೆ ಎಂದು ಜಾನಪದ ಸಾಹಿತಿಗಳಾದ ನಾಡೋಜ ಗೊ.ರು. ಚನ್ನಬಸಪ್ಪ ತಿಳಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ 2022-23ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ವಾರ್ಷಿಕ ಪ್ರಶಸ್ತಿಯ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚೆಗಷ್ಟೆ ಆರಂಭವಾದಂತಹ ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡಿರುವುದು ಆಶಾದಾಯಕ ಸಂಗತಿ. ಲಂಬಾಣಿ ಸಮುದಾಯಕ್ಕೆ ತನ್ನದೇ ಆದ ಪರಂಪರೆ, ಸಂಸ್ಕೃತಿ ಇದೆ. ಈ ಸಮುದಾಯದವರು ಶ್ರಮ ಜೀವಿಗಳಾಗಿದ್ದು, ದುಡಿಮೆಯ ಆಯಾಸವನ್ನು ಹಾಡು ಕುಣಿತದ ಮೂಲಕ ಮರೆಯುತ್ತಾರೆ.
ಪ್ರೊ.ಡಿ.ಬಿ. ನಾಯಕ ಅವರು ಲಂಬಾಣಿ ಸಮುದಾಯದ ಅಧ್ಯಯನಕ್ಕೆ ಸಂಬಂಧ ಪಟ್ಟಂತೆ ಸುಮಾರು 16 ಸಂಪುಟಗಳಲ್ಲಿ ಸಮಗ್ರ ಸಾಹಿತ್ಯವನ್ನು ಹೊರತಂದರು. ಲಂಬಾಣಿ ಸಮುದಾಯದ ಇತಿಹಾಸದಲ್ಲಿ ಇದೊಂದು ದಾಖಲೆ ಎಂದು ತಿಳಿಸಿದರು.
ಗ್ರಾಮೀಣ ವಾಸಿಗಳು ನಗರಕ್ಕೆ ವಲಸೆ ಬರುತ್ತಿದ್ದು, ಸರ್ಕಾರವು ನಗರವಾಸಿಗಳಿಗೆ ನೀಡುವ ಸವಲತ್ತುಗಳನ್ನು ಗ್ರಾಮೀಣ ಜನರಿಗೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಲಂಬಾಣಿ ಸಂಸ್ಖøತಿ ಮತ್ತು ಭಾಷಾ ಅಕಾಡೆಮಿಯ 2022-23ನೇ ಸಾಲಿನ ಗೌರವ ಪ್ರಶಸ್ತಿ ಡಾ.ಎಂ. ಶಕುಂತಲಾ ಹನುಮಂತಪ್ಪ, ಪ್ರೊ.ಪಿ.ಕೆ.ಖಂಡೋಬಾ, ಬಿ.ಹೀರಾನಾಯಕ, ಪ್ರೊ.ಡಿ.ಬಿ. ನಾಯಕ ಹಾಗೂ ಗಂಗಪ್ಪ ಕೇಮಪ್ಪ ಲಮಾಣಿ ಹಾಗೂ ವಾರ್ಷಿಕ ಪ್ರಶಸ್ತಿಗೆ ಗುಲಾಬ್ ಸಿಂಗ್ ಮೇಗು ಪತ್ತಾರ, ಕೊಟ್ರೇಶ್ ನಾಯ್ಕ, ಸಾರಂಗಿ ಉಮ್ಮಾನಾಯ್ಕ, ಗುಂಡಾಚಂದ್ರಾನಾಯ್ಕ, ಶಾಂತಿಬಾಯಿ ಕಾಶ್ಯಾನಾಯ್ಕ, ಸಾವಿತ್ರಿ ಮಾಂತೇಶ ಲಮಾಣಿ, ಸೋಪನಾರಾವ್ ರೂಪ್ಲಾ, ಪುಟ್ಟಿಬಾಯಿ ಮೀಟ್ಯಾನಾಯ್ಕ, ದೇವಲಪ್ಪ ಟೀಕಪ್ಪ ಲಮಾಣಿ, ಮಂಜುನಾಥ ಜಯಚಂದ್ರಗಿರಿ ಭಾಗನರಾಗಿದ್ದು ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.