News Kannada
Wednesday, February 01 2023

ಬೆಂಗಳೂರು ನಗರ

ಮಹಿಳೆಯರ ಬಗ್ಗೆ ವಿಶಾಲ ದೃಷ್ಟಿಕೋನವವುಳ್ಳ ಏಕೈಕ ಪಕ್ಷ ಭಾಜಪ: ಬಸವರಾಜ ಬೊಮ್ಮಾಯಿ

Photo Credit : News Kannada

ತುಮಕೂರು: ಮಹಿಳೆಯರ ಕುರಿತಾಗಿ ವಿಶಾಲ ದೃಷ್ಟಿಕೋನವನ್ನು ಹೊಂದಿರುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ಇಂದು ತುಮಕೂರಿನಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತಾಡಿದರು.

ಆರ್ಥಿಕತೆಯಲ್ಲಿಯೂ ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ. ನಮ್ಮದು ಉಳಿತಾಯದ ಸಂಸ್ಕøತಿ. ಈ ಉಳಿತಾಯ ಕುಟುಂಬದ ಆಸ್ತಿಯಾಗುತ್ತದೆ. ಕಷ್ಟದ ದಿನಗಳಲ್ಲಿ ಈ ಹಣ ನೆರವಿಗೆ ಬರಲಿದೆ. ಆದ್ದರಿಂದಲೇ ನಮ್ಮ ದೇಶದಲ್ಲಿ ಅತ್ಯಂತ ಕಡಿಮೆ ಬ್ಯಾಂಕುಗಳು ದಿವಾಳಿಯಾಗುತ್ತವೆ. ಪಾಶ್ಚಿಮಾತ್ಯ ದೇಶಗಳ ಬ್ಯಾಂಕುಗಳು ಹಾಗೂ ಮನೆಗಳಲ್ಲಿ ಉಳಿತಾಯ ಮಾಡುವ ಹಣದೊಂದಿಗೆ ನೇರವಾದ ಆರ್ಥಿಕ ಸ್ಪರ್ಧೆಯಿದೆ. ಉಳಿತಾಯ ಮಹಿಳೆಯರ ಶಕ್ತಿಯೂ ಹೌದು. ಸಾಕಷ್ಟು ವಿಚಾರಗಳಲ್ಲಿ ಮಹಿಳೆ ಅಭ್ಯಾಸದಿಂದಲೇ ಸಂಸ್ಕøತಿಯನ್ನು ಬೆಳೆಸಿದ್ದಾರೆ. ನಮ್ಮ ತಾಯಂದಿರು ಶಿಕ್ಷಣ ಪಡೆಯದಿದ್ದರೂ ಅವರಲ್ಲಿ ಜ್ಞಾನ ಭಂಡಾರವೇ ಇತ್ತು. ಆಧ್ಯಾತ್ಮ, ಮೌಲ್ಯಗಳ ಜ್ಞಾನವರಲ್ಲಿತ್ತು. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಕಾರ್ಯಕಾರಿ ಸಮತಿಯಲ್ಲಿ ಹೆಣ್ಣುಮಗುವಿನ ಭ್ರೂಣಹತ್ಯೆಯ ಬಗ್ಗೆ ಮಾತನಾಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ನಮ್ಮ ಪ್ರಧಾನಿಗಳು ಅತ್ಯಂತ ಮೃದು ಹೃದಯದ, ಕರುಣೆಯುಳ್ಳ ವ್ಯಕ್ತಿ. ಇನ್ನೂ 25 ವರ್ಷಗಳ ಕಾಲ ಅವರೇ ಈ ದೇಶವನ್ನು ಮುನ್ನಡೆಸುತ್ತಾರೆ ಎನ್ನುವ ಬಗ್ಗೆ ಸಂಶಯವಿಲ್ಲ ಎಂದರು.

ನಾಳೆಗಳು ನಿಮ್ಮವೇ
ಮಹಿಳೆಯರು ಸಂಘಟಿತರಾಗಿ, ಭಾಜಪದಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು. ಬಿಜೆಪಿ ಮಹಿಳಾ ಮೋರ್ಚಾಕ್ಕೆ ಮಾತ್ರವಲ್ಲದೇ ಬಿಜೆಪಿಯ ನಾಯಕಿಯರೂ ಆಗಬೇಕು. ಸುಶ್ಮಾ ಸ್ವರಾಜ್ ಅವರು ಪಕ್ಷದ ಪ್ರಮುಖ ನಾಯಕಿಯಾಗಿದ್ದರು. ಎಲ್ಲಾ ಪ್ರಮುಖರೊಂದಿಗೆ ಹೆಗಲಿಗೆ ಹೆಗಲು ನೀಡಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕದೊಂದಿಗೆ ಅವರಿಗೆ ವಿಶೇಷ ಸಂಬಂಧವಿತ್ತು. ಕನ್ನಡಿಗರ ಹೃದಯಗಳನ್ನು ಅವರು ತಲುಪಿದ್ದರು ಎಂದರು. ಯಾವುದೇ ತರಬೇತಿಯಿಲ್ಲದೇ ಅವರು ಇದನ್ನು ಸಾಧಿಸಿದ್ದರು. ಆದರೆ ನಿಮಗೆ ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಶಿಕ್ಷಣ. ಆರ್ಥಿಕ ಶಿಕ್ಷಣದ ಲಭ್ಯತೆ ಇದೆ. ಶಿಕ್ಷಣ ಮತ್ತು ಆರ್ಥಿಕ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಮಹಿಳೆಯರು ಇದನ್ನು ಸಾಧಿಸಿದರೆ ಅದಕ್ಕಿಂತ ದೊಡ್ಡ ಅಸ್ತ್ರವಿಲ್ಲ. ದೊಡ್ಡದಾಗಿ ಆಲೋಚಿಸಿ, ಕ್ರಮಗಳೂ ದೊಡ್ಡದಾಗಿರಲಿ. ಮಹಿಳೆಯರು ಶ್ರಮಜೀವಿಗಳು, ಪ್ರಾಮಾಣಿಕರು. ನ್ಯಾಯ, ಸಮಾನ ಅವಕಾಶಗಳಿಗಾಗಿ ಮಾತನಾಡಬೇಕು. ತನ್ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದರಲ್ಲದೇ ನಾಳೆಗಳು ನಿಮ್ಮವೇ ಎಂದರು.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ
ತಾಯಿಯೊಂದಿಗೆ ಜನ್ಮಪೂರ್ವದ ಸಂಬಂಧವಿರುತ್ತದೆ. ದೇಶವನ್ನು ನಾವು ಭಾರತ ಮಾತೆ ಎಂದು ಕರೆಯುತ್ತೇವೆ. ಭೂಮಿ ತಾಯಿ ಎಲ್ಲರ ಭಾರವನ್ನು ಹೊರುತ್ತಾಳೆ. ಅಂತೆಯೇ ತಾಯಿಯೊಬ್ಬಳು ತನ್ನ ಮಕ್ಕಳು. ಸಮಾಜದ ಭಾರವನ್ನು ಹೊರುತ್ತಾಳೆ. ದೇಶದ ಬಡವರಲ್ಲಿ ಬಡವರಾದ ತಾಯಂದಿರಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಒದಗಿಸಬೇಕು. ನಮ್ಮ ಸರ್ಕಾರ ಇದ್ದನೇ ಮಾಡುತ್ತಿದೆ. ನಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದು, ರೈತ ವಿದ್ಯಾ ನಿಧಿ ಮೂಲಕ ರೈತರ ಮಕ್ಕಳು, ಕಾರ್ಮಿಕರ ಮಕ್ಕಳಿಗೆ ಈ ವಿದ್ಯಾರ್ಥಿಏತನವನ್ನು ನೀಡಲಾಗುತ್ತಿದೆ. ಎಲ್ಲಾ ಹೆಣ್ಣುಮಕ್ಕಳಿಗೆ ಅವಕಾಶ ದೊರೆತರೆ ಗಂಡುಮಕ್ಕಳನ್ನು ಎಲ್ಲಾ ಕ್ಷೇತ್ರಗಳಲ್ಲಿ ಹಿಂದಿಕ್ಕಿ ಮುಂದುವರೆಯುತ್ತಿದ್ದಾರೆ ಎಂದರು.

See also  ಪಿಯುಸಿ ಪರೀಕ್ಷೆ ಅಂಕಗಳ ಕುರಿತು ಸ್ಪಷ್ಟನೆ ನೀಡಿದ ಸಚಿವ ಸುರೇಶ್ ಕುಮಾರ್

ಮಹಿಳೆಯರು ದೇಶದ ಅಭಿವೃದ್ಧಿಯ ಕೇಂದ್ರವಾಗಬೇಕು
ಕಾಲ ಬದಲಾವಣೆಯಾಗುತ್ತಿದೆ. ಜನಸಂಖ್ಯೆಯ ಶೇ 50 ರಷ್ಟು ಮಹಿಳೆಯರ ಕೊಡುಗೆ ಕೇವಲ ಯುವಕರಿಂದ ಮಾತ್ರವಲ್ಲದೇ ಮಹಿಳೆಯರ ಮೂಲಕವೂ ಪ್ರಾರಂಭವಾಗಬೇಕು. 150 ಕೋಟಿ ಕೈಗಳು ಕೆಲಸ ಮಾಡಿದರೆ ದೇಶವೇ ಮುನ್ನೆಡೆಯುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳುವ ಅಮೃತ ಕಾಲ ಸನ್ನಿಹಿತವಾಗಿದೆ. ಅದು ಮಹಿಳೆಯರ ಸಹಭಾಗಿತ್ವವಿಲ್ಲದೇ ಪೂರ್ಣವಾಗುವುದಿಲ್ಲ. ಮಹಿಳೆಯರು ದೇಶದ ಅಭಿವೃದ್ಧಿಯ ಕೇಂದ್ರವಾಗಬೇಕು. ವಿಜ್ಞಾನ, ಏರೋಸ್ಪೇಸ್, ಇಂಜಿನಿಯರಿಂಗ್, ಐಟಿ ಬಿಟಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.

ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕಳ್ಳಲು ನೆರವು
ಕಷ್ಟಕರ, ಸೂಕ್ಷ್ಮ ಹಾಗೂ ಬುದ್ದಿವಂತ ಕೆಲಸಗಳನ್ನು ಮಾಡಲು ಮಹಿಳೆಯರು ಸಮರ್ಥರಿದ್ದು ಕೇವಲ ಅವಕಾಶಗಳನ್ನು ನೀಡಬೇಕಿದೆ. ನಮ್ಮ ಸರ್ಕಾರ ಅವಕಾಶಗಳನ್ನು ನೀಡುವ ಕೆಲಸ ಮಾಡುತ್ತಿದ್ದು, ಈ ವರ್ಷ 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗವನ್ನು ನೀಡುತ್ತಿದೆ. ಸ್ತ್ರೀ ಸಾಮಥ್ರ್ಯ ಯೋಜನೆಯಡಿ ಯೋಜನೆಗಳಿಗೆ ಆರ್ಥಿಕ ನೆರವು, ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ಸ್ವಾವಲಂಬೀ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕಳ್ಳಲು ಸರ್ಕಾರ ನೆರವು ನೀಡುತ್ತಿದೆ ಎಂದು ತಿಳಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು