ಬೆಂಗಳೂರು: ರಾಜ್ಯದಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ, ಪ್ರಮಾಣ ಹೆಚ್ಚಿಸುವಲ್ಲಿ, ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ ಸ್ಥಾಪನೆ, ಗಣನೀಯ ಸೇವೆ ಸಲ್ಲಿಸಲಿದೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ, ಹೇಳಿದ್ದಾರೆ.
ನಾಳೆ, ಶನಿವಾರ ದಂದು, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ರವರು, ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ ಸ್ಥಾಪನೆ ಸಂಬಂಧ, ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ, ಶಂಕು ಸ್ಥಾಪನೆ ನೆರವೇರಿಸಲಿದ್ದು, ಅಪರಾಧ ಪತ್ತೆ ಪ್ರಕರಣದ ತನಿಖೆಗೆ ಸಹಾಯಕವಾಗುವ ನಿಟ್ಟಿನಲ್ಲಿ, ಪ್ರಮುಖ ಮೈಲಿಗಲ್ಲು ಆಗಲಿದೆ, ಎಂದಿದ್ದಾರೆ.
ಅಪರಾಧ ಪತ್ತೆ ಪ್ರಕ್ರಿಯೆಯಲ್ಲಿ, ಆಧುನಿಕ ತಂತ್ರಜ್ಞಾನದ ಬಳಕೆ ಅತ್ಯಂತ ಪರಿಣಾಮಕಾರಿ ಫಲಿತಾಂಶ ನೀಡಲಿದ್ದು, ನ್ಯಾಯಾಲಯಗಳೂ, ಈ ಸಂಬಂಧ, ಉತ್ತೇಜನ ನೀಡುತ್ತಿವೆ, ಎಂದಿರುವ, ಸಚಿವರು, ರಾಜ್ಯ ಸರಕಾರ, ಈ ಸಂಬಂಧ, ತರಬೇತಿ ಪಡೆದ ಮಾನವ ಸಂಪನ್ಮೂಲ, ನಿರ್ಮಾಣಕ್ಕೆ ಆದ್ಯತೆ ನೀಡಿದೆ, ಎಂದಿದ್ದಾರೆ.
ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ ಸ್ಥಾಪನೆ ಕುರಿತು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇತ್ತೀಚೆಗೆ, ಅಹಮದಾಬಾದ್ ನಲ್ಲಿರುವ, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ ಕೇಂದ್ರಕ್ಕೆ, ರಾಜ್ಯದ ಹಿರಿಯ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದರು.
ರಾಜ್ಯದಲ್ಲಿ, ಉದ್ದೇಶಿತ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ, ಸಂಪೂರ್ಣವಾಗಿ, ಕೇಂದ್ರದ ಅನುದಾನದ ನೆರವಿನೊಂದಿಗೆ ಸ್ಥಾಪನೆಗೊಳ್ಳುತ್ತಿದೆ.