ಬೆಂಗಳೂರು: ಬ್ರಾಹ್ಮಣರು ಯಾಕೆ ರಾಜ್ಯದ ಸಿಎಂ ಆಗಬಾರದು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪಿಸಿದಾಗ ರಾಜಕೀಯ ಲಾಭಕ್ಕಾಗಿ ಬ್ರಾಹ್ಮಣರನ್ನು ರಾಜಕಾರಣಿಗಳು ಟಾರ್ಗೆಟ್ ಮಾಡುತ್ತಾರೆ.
ಬ್ರಾಹ್ಮಣರು ಈ ದೇಶದ ಪ್ರಜೆಗಳಲ್ಲವೇ?, ಅವಕಾಶವಿದ್ದರೆ ಬ್ರಾಹ್ಮಣ ನಾಯಕ ಸಿಎಂ ಆಗಲಿ ಎಂದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬ್ರಾಹ್ಮಣರ ವಿರುದ್ಧ ಹೇಳಿಕೆ ನೀಡುವುದು ಹೊಸದೇನಲ್ಲ.
“ಬ್ರಾಹ್ಮಣರ ಸಂಖ್ಯೆ ಕಡಿಮೆ ಇರುವ ಕಾರಣ ರಾಜಕಾರಣಿಗಳಿಗೆ ಸುಲಭವಾಗಿ ಗುರಿಯಾಗುತ್ತಾರೆ” ಎಂದು ಅವರು ಆರೋಪಿಸಿದರು.