ಬೆಂಗಳೂರು: ಹಿರಿಯ ರಾಜಕಾರಣಿ ಟಿ. ಜಾನ್ (92) ಅವರು ಬೆಂಗಳೂರಿನ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾದರು. ಇವರು ಎಸ್. ಎಂ ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದರು.
ಕೊಡುಗೈ ದಾನಿ ಎಂದೆ ಖ್ಯಾತರಾಗಿದ್ದ ಇವರು, ಅಬಕಾರಿ ಉದ್ಯಮದ ಮೂಲಕ ಹೆಸರು ಪಡೆದಿದ್ದರು. ಕೇರಳದಿಂದ ಕೊಡಗಿಗೆ ಬಂದು ಸಾಕಷ್ಟು ಕಷ್ಟಪಟ್ಟು ಛಲದಿಂದ ಉದ್ಯಮದಲ್ಲಿ ಹಂತ ಹಂತವಾಗಿ ಸಿರಿವಂತಿಕೆ ಪಡೆದುಕೊಂಡಿದ್ದರು. ಶಿಕ್ಷಣ ಸಂಸ್ಥೆಗಳು. ರೆಸಾರ್ಟ್ ಗಳನ್ನೂ ಕೂಡ ಜಾನ್ ಆರಂಭಿಸಿ ಯಶಸ್ಸುಗಳಿಸಿದ್ದರು.
ಟಿ. ಜಾನ್ ಅವರ ಅಂತ್ಯಕ್ರಿಯೆ ನಾಳೆ ಬೆಂಗಳೂರಿನಲ್ಲಿ ಜರುಗಲಿದೆ.