ಬೆಂಗಳೂರು: ಉತ್ತರ ಪ್ರದೇಶದ ಮೂಲದ ಆದಾಯ ತೆರಿಗೆ ಇಲಾಖೆಯ ಇನ್ಸ್‌ಪೆಕ್ಟರ್ ಒಬ್ಬರು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಬಿಡಿಎ ಕಚೇರಿ ಬಳಿ ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಲಿಯಾದವರನ್ನು ದೇವೇಂದ್ರ ದುಬೆ ಎಂದು ಗುರುತಿಸಲಾಗಿದ್ದು, ಪೊಲೀಸರ ಪ್ರಕಾರ, ಘಟನೆ 10 ದಿನಗಳ ಹಿಂದೆ ನಡೆದಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿದೆ.
ದೇವೇಂದ್ರ ದುಬೆ ಬೆಂಗಳೂರು ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಗೆ ಮೊದಲು ದುಬೆ ಅವರು ತನ್ನ ವಿಮಾ ಪಾಲಿಸಿಯ ಪ್ರತಿ
ಮತ್ತು ಆತ್ಮಹತ್ಯೆ ಪತ್ರವನ್ನು ಅವರ ಪತ್ನಿಗೆ ವಾಟ್ಸಾಪ್ ನಲ್ಲಿ ಕಳುಹಿಸಿದ್ದರು. ಆತ್ಮಹತ್ಯೆ ಪತ್ರದಲ್ಲಿ, ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪತ್ನಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತರು