ಬೆಂಗಳೂರು: ಮುಧೋಳ ಶ್ವಾನ ತಳಿ ಅಭಿವೃದ್ಧಿಗೆ ಅನುದಾನ, ಬೆಂಗಳೂರು ಟ್ರಾಫಿಕ್ ಕಂಟ್ರೋಲ್‌ಗೆ 150 ಕೋಟಿ ರೂ. ಮಾಸ್ಟರ್ ಪ್ಲಾನ್ ಅನ್ನು ಸಿಎಂ ಘೋಫಷಿಸಿದ್ದಾರೆ. ಅರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಟ್ರಾಫಿಕ್ ನಿರ್ವಹಣೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಶುಕ್ರವಾರ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಮತ್ಸ್ಯ ಸಿರಿ ಯೋಜನೆ: ಮತ್ಸ್ಯ ಸಿರಿ ಯೋಜನೆ ಮೂಲಕ ಸಿಗಡಿ ಉತ್ಪನ್ನ ರಫ್ತಿಗೆ ಕ್ರಮಕೈಗೊಳ್ಳಲಾಗುವುದು. ಬಳ್ಳಾರಿ, ರಾಯಚೂರಿನಲ್ಲಿ ಸಿಗಡಿ ಕೃಷಿ ಕ್ಲಸ್ಟರ್ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಎತ್ತಿನಹೊಳೆ ಯೋಜನೆ ಪೂರ್ಣಕ್ಕೆ ಕ್ರಮ: ಎತ್ತಿನಹೊಳೆ ಯೋಜನೆ ಪ್ರಥಮ ಹಂತ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕೋಲಾರ, ಶ್ರೀನಿವಾಸ ಭಾಗದಲ್ಲಿ ಯೋಜನೆ ಪೂರ್ಣಕ್ಕೆ ಅನುದಾನ ನೀಡಲಾಗುವುದು ಎಂದು ವಿವರಿದರು.
ಕರಾವಳಿ ಮಲೆನಾಡಿಗೆ ಸಹ್ಯಾದ್ರಿ ಸಿರಿ: ಕರಾವಳಿ ಮಲೆನಾಡಿಗೆ ಸಹ್ಯಾದ್ರಿ ಸಿರಿ ಯೋಜನೆ ಘೋಷಣೆ ಮಾಡಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ದೊರೆತಿದ್ದೇನು: ಆರೋಗ್ಯ ಕ್ಷೇತ್ರಕ್ಕೆ 781 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, 100 ಸಮುದಾಯ ಆರೋಗ್ಯ ಸ್ಥಾಪನೆ, 438 ನಮ್ಮ ಕ್ಲಿನಿಕ್ ಸ್ಥಾಪನೆಗೆ ಅನುದಾನ ನೀಡಲಾಗುವುದು. ಮೂರು ಜಿಲ್ಲೆಗಳಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಿದೆ. ಮನೆ ಮನೆಗೆ ಔಷಧ ವಿತರಿಸಲು ಕ್ರಮ ಕೈಗೊಳ್ಳಲಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ಕೈಗೊಂಡಿದ್ದು, ಸವಣೂರಿನಲ್ಲಿ ಮೊದಲ ಆಸ್ಪತ್ರೆ ಸ್ಥಾಪಿಲಾಗುವುದು. ಸ್ತನ, ಬಾಯಿ ಕ್ಯಾನ್ಸರ್ ಪತ್ತೆಗೆ ಜೀವಸುಧೆ ಯೋಜನೆ, ಜನೌಷಧಿ ಕೇಂದ್ರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದ್ದಾರೆ.
ಹೊಸ ವಿವಿ ಘೋಷಣೆ: ಚಿಕ್ಕಮಗಳೂರಿನಲ್ಲಿ ಹೊಸ ವಿವಿ ನಿರ್ಮಾಣಕ್ಕೆ ಕ್ರಮ, ಬೆಂಗಳೂರಿನಲ್ಲಿ ಶಂಕರನಾಗ್ ಹೆಸರಿನಲ್ಲಿ ಆಟೋರಿಕ್ಷಾ ಪಾರ್ಕಿಂಗ್ ನಿರ್ಮಾಣಕ್ಕೆ ಕ್ರಮ.
ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.