ಬೆಂಗಳೂರು: ಕೆಲಸದ ಸಮಯವನ್ನು 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸುವ ಮಸೂದೆಯನ್ನು ವಿಧಾನಸಭೆ ಬುಧವಾರ ಅಂಗೀಕರಿಸಿದೆ.
ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ, 2023 ರ ಪ್ರಕಾರ, ಕೆಲಸದ ಸಮಯವನ್ನು ಈಗಿರುವ 9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಅವಕಾಶ ನೀಡುತ್ತದೆ.
ಗರಿಷ್ಠ ದೈನಂದಿನ ಕೆಲಸದ ಸಮಯವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಕಾರ್ಖಾನೆಗಳ ಯಾವುದೇ ಗುಂಪು ಅಥವಾ ವರ್ಗವು ಕಾರ್ಮಿಕರ ಒಟ್ಟು ಕೆಲಸದ ಸಮಯವನ್ನು ವಿರಾಮವಿಲ್ಲದೆ 6 ಗಂಟೆಗಳವರೆಗೆ ವಿಸ್ತರಿಸಬಹುದು ಎಂದು ಮಸೂದೆ ವಿವರಿಸುತ್ತದೆ.