ಬೆಂಗಳೂರು: ಬೆಂಗಳೂರು ನಗರ ವೈಯಾಲಿಕಾವಲ್ ನ ರೌಡಿ ಶೀಟರ್ ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿಗೆ ಪ್ರಧಾನಿ ನರೇಂದ್ರ ಮೋದಿ ನಮಿಸುತ್ತಿರುವ ಫೋಟೋ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಶಿಸ್ತಿನ ಸಿಪಾಯಿಗಳೆಂದು ಕರೆದುಕೊಳ್ಳುವ ಬಿಜೆಪಿಯ ಪ್ರಧಾನಿಯೊಬ್ಬರು ಸಮಾಜಘಾತುಕ ವ್ಯಕ್ತಿಗೆ ನಮಿಸುತ್ತಿರುವುದು ಟೀಕೆಗೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಹೆಲಿಪ್ಯಾಡ್‍ಗೆ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಸ್ವಾಗತ ಕೋರಿದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ನಾಗಮಂಗಲ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ(ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್ ಈ ಕುರಿತು ಸ್ಪಷ್ಟಪಡಿಸಿದ್ದರು) ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಸಹ ಮೋದಿ ಅವರಿಗೆ ಸ್ವಾಗತ ಕೋರಿದ್ದಾರೆ. ರವಿ ನಮಸ್ಕರಿಸಿರುವುದಕ್ಕೆ ಪ್ರತಿಯಾಗಿ ಪ್ರಧಾನಿಯೂ ಪ್ರತಿಯಾಗಿ ನಮಿಸುವುದು ಚಿತ್ರದಲ್ಲಿದೆ.
ಕ್ರಿಕೆಟ್ ಬುಕ್ಕಿ ನಾಗಮಂಗಲ ಬಿಜೆಪಿ ಟಿಕೇಟ್ ಆಕಾಂಕ್ಷಿ: ರವಿ ಕ್ರಿಕೆಟ್ ಬುಕ್ಕಿಯಾಗಿದ್ದು ಅನೇಕ ಕಾನೂನು ಬಾಹಿರ ಚಟುವಟಕೆಯಲ್ಲಿ ಭಾಗಿಯಾಗಿದ್ದಾನೆ. ವಯ್ಯಾಲಿಕಾವಲ್ ರೌಡಿ ಶೀಟರ್ ಪಟ್ಟಿಯಲ್ಲಿ ರವಿ ಹೆಸರಿದೆ. ಈತ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾನೆ ಎನ್ನಲಾಗಿದೆ. ಕಳೆದ ನವೆಂಬರ್ 28ರಂದು ರವಿ ಬಿಜೆಪಿಗೆ ಸೇರ್ಪಡೆಯಾಗಿರುವುದನ್ನು ಗಮನಿಸಬಹುದು.
ಕಾಂಗ್ರೆಸ್ ಕಟುಟೀಕೆ: ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಟ್ವೀಟ್ ನಲ್ಲಿ ವಿವರಿಸಿದೆ. ಇನ್ನೊಂದು ಟ್ವೀಟ್‌ನಲ್ಲಿ ನಾವು ಎಂದು ಯಾರ ಸಾವನ್ನೂ ಬಯಸುವುದಿಲ್ಲ . ನೀವು ಆರೋಗ್ಯವಾಗಿರಿ, ದೀರ್ಘಾಯುಷಿ ಆಗಿರಿ.
ಹಾಗೇನಾದರೂ ನಿಮಗೆ ತೊಂದರೆ ಆದರೆ ಅದಕ್ಕೆ ಇದಕ್ಕಿಂತ ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ನಿಮ್ಮೆದುರು ತಂದು ನಿಲ್ಲಿಸುವ ನಿಮ್ಮ ಪಕ್ಷದವರೇ ಕಾರಣ. ಇಂತಹವರಿಂದ ಸಾಧ್ಯವಾದಷ್ಟು ದೂರವಿರಿ ಎಂದು ಟ್ವೀಟ್ ಮಾಡಿದೆ.
ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ.
ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ @narendramodi ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ.
ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು. pic.twitter.com/BOcpzumtHm
— Karnataka Congress (@INCKarnataka) March 12, 2023
ಪ್ರಧಾನಿ ಮೋದಿಯವರೇ, ನಾವು ಎಂದೂ ಯಾರ ಸಾವನ್ನು ಬಯಸುವುದಿಲ್ಲ. ನೀವು ಆರೋಗ್ಯವಾಗಿರಿ. ದೀರ್ಘಾಯುಷಿ ಆಗಿರಿ.
ಹಾಗೇನಾದರೂ ನಿಮಗೆ ತೊಂದರೆ ಆದರೆ ಅದಕ್ಕೆ ಇಂತಹ ರೌಡಿ ಶೀಟರ್ ಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ನಿಮ್ಮೆದುರು ತಂದು ನಿಲ್ಲಿಸುವ ನಿಮ್ಮ ಪಕ್ಷದವರೇ ಕಾರಣ. ಇಂತಹವರಿಂದ ಸಾಧ್ಯವಾದಷ್ಟು ದೂರವಿರಿ. pic.twitter.com/rVM985nkM7
— Karnataka Congress (@INCKarnataka) March 13, 2023