ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೇ.15ರಷ್ಟು ವೇತನ ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಮಾ.24ರಿಂದ ಈ ಸಂಬಂಧ ಮುಷ್ಕರ ನಡೆಸಲು ನೌಕರರು ನಿರ್ಧಾರ ಮಾಡಿದ್ದನ್ನು ಗಮನಿಸಬಹುದು. ಇದು ನಮ್ಮ ಸಿಬ್ಬಂದಿಗೆ ಶುಭವಾಗಿದ್ದು, ತಮ್ಮ ಮುಷ್ಕರ ನಿರ್ಧಾರವನ್ನು ಹಿಂಪಡೆಯುವ ನಂಬಿಕೆ ಇದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಇಂದು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15% ವೇತನ ಹೆಚ್ಚಳ ಮಾಡೋಕೆ ನಿರ್ಧಾರ ಮಾಡಿದ್ದೇವೆ.
ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆ ನಮ್ಮ ಸರ್ಕಾರ ಮಾಡಿದೆ.
— B Sriramulu (@sriramulubjp) March 16, 2023