News Kannada
Thursday, June 01 2023
ಬೆಂಗಳೂರು ನಗರ

ಬೆಂಗಳೂರು: ನೀತಿ ಸಂಹಿತೆ ಉಲ್ಲಂಘನೆ, ಆಟೋ ಚಾಲಕನಿಗೆ 5 ಸಾವಿರ ರೂ. ದಂಡ

Bengaluru: Auto driver fined Rs 5,000 for violating model code of conduct Penalty
Photo Credit : News Kannada

ಬೆಂಗಳೂರು: ವಿಧಾನಸಭೆ ಚುನಾವಣೆ ನೀತಿಸಂಹಿತೆಯೂ ಜಾರಿಯಲ್ಲಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದು, ವಿವಿಧ ಚಟುವಟಿಕೆ ಫ್ಲೆಕ್ಸ್‌, ಬ್ಯಾನರ್‌, ಸಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಆಟೋ ಚಾಲಕರು ಕೂಡ ತುಂಬಾ ಎಚ್ಚರಿಕೆಯಲ್ಲಿರಬೇಕಾಗುತ್ತದೆ. ಏಕೆಂದರೆ ಆಟೋ ಮೇಲೆ ರಾಜಕೀಯ ನಾಯಕರ ಭಾವಚಿತ್ರ, ಚಿಹ್ನೆ ಇರುವಂತಿಲ್ಲ. ಹಾಗೇನಾದರು ಇದ್ದಲ್ಲಿ ಚಾಲಕರಿಗೆ ಆರ್ ಟಿಒ ಅಧಿಕಾರಿಗಳಿಂದ ಫೈನ್‌ ಬೀಳುವುದು ಬೀಳುವುದು ಖಚಿತ.

ಬೆಂಗಳೂರಿನಲ್ಲಿ ಈ ಘಟನೆ ವರದಿಯಾಗಿದ್ದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಆರ್ ಟಿಒ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೆಡಿಎಸ್ ಪರ ಪ್ರಚಾರ ಮಾಡುವ ಕವರ್ ಅಂಟಿಸಿದ್ದ ಆಟೋ ಚಾಲಕನಿಗೆ ಆರ್ ಟಿಓ ಅಧಿಕಾರಿಗಳು 5,000 ರೂ. ದಂಡ ವಿಧಿಸಿ ಶಾಕ್ ನೀಡಿದ್ದಾರೆ. ಆಟೋ ಮೇಲೆ ರಾಜಕೀಯ ಪ್ರೇರಿತ ಫೋಟೋ, ಚಿಹ್ನೆ ಇದ್ದರೆ ನೀವು 5,000 ರೂ. ದಂಡ ತೆರಬೇಕಾಗುತ್ತದೆ. ಆರ್ ಟಿಒ ಅಧಿಕಾರಿಗಳು ಪರ್ಮಿಟ್ ಉಲ್ಲಂಘನೆ ಕೇಸ್ ದಾಖಲು ಮಾಡುತ್ತಿದ್ದಾರೆ. ಕೇಸ್ ಹಾಕಿ 2 ಸಾವಿರ ರೂ. ದಂಡ ವಿಧಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

See also  ಫೆ.10ರಿಂದ ಪ್ರಥಮ ಪಿಯುಸಿ ಪರೀಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು