ಬೆಂಗಳೂರು: ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಪಕ್ಷವನ್ನು ನಟ ಸುದೀಪ್ ಬೆಂಬಲಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡಿದ್ದಾರೆ. ಇದು ರಾಜಕೀಯ ಅಂಕಗಳನ್ನು ಗಳಿಸಲು ಮಾಡಿದ ಬೇಜವಾಬ್ದಾರಿಯುತ ಹೇಳಿಕೆಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹೇಳಿದ್ದಾರೆ. ಇದು ಎಸ್ಟಿ ಸಮುದಾಯ, ಕನ್ನಡ ಕಲಾವಿದರಿಗೆ ಮಾಡಿದ ಅವಮಾನ. ಕಷ್ಟದ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಬೊಮ್ಮಾಯಿ ಅವರು ನೀಡಿದ ಸಹಾಯವನ್ನು ಪರಿಗಣಿಸಿ, ಸುದೀಪ್ ಅವರು ಬಿ.ಎಸ್.ಬೊಮ್ಮಾಯಿ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಎಸ್ಟಿ ನಾಯಕ ಸಮುದಾಯದಿಂದ ಬಂದಿರುವ ಸುದೀಪ್ ಅವರು ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಗಾಗಿ ನಿಲ್ಲುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಸುದೀಪ್ ಅವರನ್ನು ತುಳಿಯುವ ಉದ್ದೇಶದಿಂದ ಅವರಿಗೆ ಕಳುಹಿಸಲಾದ ಬೆದರಿಕೆ ಪತ್ರಕ್ಕೆ ಅವರು ಸೊಪ್ಪು ಹಾಕುವುದಿಲ್ಲ. ಈ ಹೇಳಿಕೆಗಳನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ, ಇದು ಎಸ್ಟಿ ನಾಯಕ ಸಮುದಾಯಕ್ಕೆ ಅವಮಾನ ಮಾತ್ರವಲ್ಲ, ಚಲನಚಿತ್ರ ಕಲಾವಿದರಿಗೆ ಮಾಡಿದ ಅವಮಾನ ಎಂದು ಅವರು ತಿಳಿಸಿದ್ದಾರೆ.