ಬೆಂಗಳೂರು: ವಿಧಾನ ಸಭೆ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ತಂತ್ರ ಹೂಡಿರುವ ಬಿಜೆಪಿ ಮತದಾರರ ಮನಗೆಲ್ಲಲು ಹಲವು ವಿಧಾನಗಳ ಮೊರೆಹೋಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವಿರೋಧಿಗಳನ್ನು ಕಟ್ಟಿಹಾಕಿ ಚುನಾವಣೆ ಗೆಲ್ಲುವುದು ಬಿಜೆಪಿಯ ಹಳೆಯ ವಿಧಾನ. ಇದಕ್ಕಾಗಿ ಹಲವು ವರ್ಷಗಳ ಹಿಂದೆಯೇ ಐಟಿ ಸೆಲ್ ಹುಟ್ಟುಹಾಕಿದ್ದು, ಈ ಮೂಲಕ ಪಕ್ಷದ ವಿಚಾರಧಾರೆ, ಅಭಿವೃದ್ಧಿ, ವಿರೋಧಿಗಳ ನ್ಯೂನ್ಯತೆಯನ್ನು ಗುರುತಿಸಿ ಪಕ್ಕಾ ಪ್ಲ್ಯಾನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿ ಅದನ್ನು ವೋಟನ್ನಾಗಿ ಪರಿವರ್ತಿಸುವ ವಿಚಾರ ಬಿಜೆಪಿಗೆ ಹಿಂದಿನಿಂದಲೇ ಕರಗತವಾಗಿದೆ.
ಈ ಸಲದ ವಿಧಾನಸಭೆ ಚುನಾವಣೆಗೆ ಚುನಾವಣಾ ಪ್ರಚಾರದ ಹಾಡು ಬಿಡುಗಡೆಗೊಳಿಸಿದ್ದು, ಸೂಪರ್‌ಹಿಟ್ ಆರ್‌ಆರ್‌ಆರ್ ಸಿನಿಮಾದ ಆಸ್ಕರ್ ವಿಜೇತ ಹಾಡು ನಾಟು ನಾಟು ದಾಟಿಯಲ್ಲಿ ರಿಮಿಕ್ಸ್ ಮಾಡಿದ ಈ ಹಾಡು ಬಿಡುಗಡೆಯಾದ ಬೆನ್ನಲ್ಲೇ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಹಾಡಿನಲ್ಲಿ ನಾಟು ನಾಟು ಬದಲಾಗಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ಕಾರ್ಯಕ್ರಮಗಳನ್ನು ಹೇಳಲಾಗಿದೆ. ಚುನಾವಣಾ ಪ್ರಚಾರದ ಈ ಹಾಡಿನಲ್ಲಿ ಮೂಲ ನಾಟು ನಾಟು ಸಾಹಿತ್ಯದ ಬದಲಾಗಿ ಎಲ್ಲರೂ ಸೇರಿ ಹಾಡಿ ಮೋದಿ ಮೋದಿ ಎಂದು ಬದಲಾಯಿಸಲಾಗಿದೆ. ಯುವಕರು ಈ ಹಾಡಿಗೆ ನೃತ್ಯ ಮಾಡಿದ್ದು, ಮೂಲ ವಿಡಿಯೋದಲ್ಲಿರುವ ‘ನಾಟು ನಾಟು’ ಹಾಡಿಗೆ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ರೀತಿಯಲ್ಲಿ ಯುವಕರು ಕುಣಿದಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಮೆಟ್ರೋ ಮಾರ್ಗಗಳು ಮತ್ತು ಇತರ ಕಲ್ಯಾಣ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಈ ಹಾಡು ವೈರಲ್ ಆಗುತ್ತಿದ್ದು, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಟ್ವಿಟರ್‌ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಡಬಲ್ ಎಂಜಿನ್ ಕರ್ನಾಟಕ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಪರ್ವವನ್ನು ಅದ್ಭುತವಾದ ಹಾಡಿನ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ @BJYM ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ. ಈ ವಿಡಿಯೋವನ್ನು ಕೇಂದ್ರ ಸಚಿವೆ ಶೋಭಾ ಹಂಚಿಕೊಂಡಿದ್ದು, ಹಲವರ ಗಮನ ಸೆಳೆದಿದೆ.
A masterpiece of musical composition by a devoted BJYM Karyakartha!
A testament to the boundless enthusiasm & commitment of our party workers.
We are deeply grateful for their hard work & dedication.
Thank you @BJYM! pic.twitter.com/3UvN7iD2du
— Shobha Karandlaje (@ShobhaBJP) April 10, 2023