ತುಮಕೂರು: ಪಾರಿವಾಳ ಮಾರಾಟ ಮಾಡಿದ ಹಣದ ವಿಚಾರವಾಗಿ ಜಗಳವಾಡಿ ಲಾಂಗ್‌ನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನೆಡೆಸಿದ ೬ ಮಂದಿ ಯುವಕರನ್ನು ಬಂಧಿಸುವಲ್ಲಿ ಪಿಎಸೈ ಚೇತನ್‌ಕುಮಾರ್ ನೇತೃತ್ವದ ಕೊರಟಗೆರೆ ಪೊಲೀಸರ ತಂಡ ಯಶಸ್ವಿಯಾಗಿದೆ.
ಬೆಂಗಳೂರು ಮೂಲದ ಅಜಯ್ ಎಂಬಾತನಿಂದ ಸಂಜಯ್ ಎಂಬುವನು ೨ ಸಾವಿರ ರೂಗಳಿಗೆ ಪಾರಿವಾಳ ಖರೀದಿಸಿ 800 ರೂ ಮುಂಗಡವಾಗಿ ಅಡ್ವಾನ್ ನೀಡಿ ಪಾರಿವಾಳ ಪಡೆದು ಉಳಿದ ಹಣ ನಂತರ ನೀಡುವುದಾಗಿ ತಿಳಿಸಿದ್ದಾನೆ. ಕೆಲ ದಿನಗಳು ಕಳೆದರೂ ಉಳಿದ 1200 ರೂಗಳು ನೀಡದ ಹೀನ್ನೆಲೆಯಲ್ಲಿ ತಕ್ಷಣ ಬಾಕಿ 1200 ರೂಗಳು ನೀಡುವಂತೆ ಅಜಯ್ ಒತ್ತಾಯಕ್ಕೆ ಆಕ್ರೋಶಗೊಂಡ ಸಂಜಯ್ ಬಾಕಿಹಣ ಕೊಡುತ್ತೇನೆಂದು ಕಾಳಿದಾಸ ಬಡಾವಣೆಯ ಹಿಂಭಾಗದ ಗುಟ್ಟೆಯ ಬಳಿ ಕರೆಸಿಕೊಂಡು ಲಾಂಗ್ ತೆಗೆದು ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ಗಲಾಟೆ ಸಮಯದಲ್ಲಿ ಅಜಯ್ ಅವರ ಬಾವ ಸಂಪತ್ ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಮುಂದಾದಗ ಸಂಪತ್ ಕೈ ಬೆರಳುಗಳಿಗೆ ಗಾಯಗಳಾಗಿದ್ದು ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದ ಪಿಎಸೈ ಚೇತನ್‌ಕುಮಾರ್ ಕೊರಟಗೆರೆ ಪಟ್ಟಣದ ಕಾಳಿದಾಸ ಬಡಾವಣೆ ಹಿಂಭಾಗದ ಗುಟ್ಟೆಯಲ್ಲಿ ಸಿನಿಮಾ ಶೈಲಿಯಲ್ಲಿ ಲಾಂಗ್ ಹಿಡದು ಹಲ್ಲೆ ಮಾಡಿದ್ದ ಆರೋಪಿಗಳಾದ ಸಂಜಯ್, ಗಣೇಶ, ನಂದಕುಮಾರ್, ತೇಜಾ ಸೇರಿದಂತೆ ಅಪ್ರಾಸ್ತ ವಯಸ್ಸಿನ ಇಬ್ಬರು ಬಾಲಕರು ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿಪಿಐ ಸುರೇಶ್ ಮಾರ್ಗದರ್ಶನದಲ್ಲಿ ಪಿಎಸೈ ಚೇತನ್‌ಕುಮಾರ್, ಎಎಸೈ ಯೋಗೀಶ್ ಸ್ಥಳ ಪರಿಶೀಲನೆ ಮಾಡಿ 6 ಮಂದಿ ಯುವಕರ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.